ಎಮಿಲಿನೊ ಸ್ಮರಣಾರ್ಥ ಮೌನ ಪ್ರಾರ್ಥನೆಗೆ ಸೂಚನೆ

Update: 2019-02-12 18:16 GMT

ಪ್ಯಾರಿಸ್, ಫೆ.12: ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಯುವ ಫುಟ್ಬಾಲ್ ಆಟಗಾರ ಎಮಿಲಿನೊ ಸಲಾ ಸ್ಮರಣಾರ್ಥ ಮುಂದಿನ ವಾರ ನಡೆಯುವ ಚಾಂಪಿಯನ್ಸ್ ಲೀಗ್ ಹಾಗೂ ಯುರೋಪಾ ಲೀಗ್ ಪಂದ್ಯಗಳಲ್ಲಿ ವೌನ ಪ್ರಾರ್ಥನೆ ನಡೆಸಲಾಗುವುದು ಎಂದು ಯುಇಎಫ್‌ಎ ಮಂಗಳವಾರ ತಿಳಿಸಿದೆ.

ಅರ್ಜೆಂಟೀನದ ಫಾರ್ವರ್ಡ್ ಆಟಗಾರ ಎಮಿಲಿನೊ ಜನವರಿಯಲ್ಲಿ ಕಾರ್ಡಿಫ್ ಸಿಟಿ ಫುಟ್ಬಾಲ್ ಕ್ಲಬ್‌ನೊಂದಿಗೆ 15 ಮಿಲಿಯನ್ ಪೌಂಡ್ ಒಪ್ಪಂದಕ್ಕೆ ಸಹಿ ಹಾಕಿದ್ದರು. ಕಾರ್ಡಿಫ್ ಕ್ಲಬ್‌ನ್ನು ಸೇರಿಕೊಳ್ಳಲು ಕಳೆದ ತಿಂಗಳು ವಿಮಾನದಲ್ಲಿ ತೆರಳುತ್ತಿದ್ದ ವೇಳೆ ವಿಮಾನ ಸಮುದ್ರದ ಮಧ್ಯೆ ಪತನಗೊಂಡಿತ್ತು. ಎಮಿಲಿನೊ ಹಾಗೂ ಅವರ ಪೈಲಟ್ ಪ್ರಯಾಣಿಸುತ್ತಿದ್ದ ಎರಡು ಸೀಟಿನ ವಿಮಾನದ ಅವಶೇಷ ಕಳೆದ ವಾರ ಪತ್ತೆಯಾಗಿತ್ತು. ಆಗ ಎಮಿಲಿನೊ ಮೃತಪಟ್ಟಿರುವುದು ಖಚಿತವಾಗಿತ್ತು. ಆದರೆ, ಪೈಲಟ್ ಶವ ಇನ್ನೂ ಪತ್ತೆಯಾಗಿಲ್ಲ.

ಎಲ್ಲರ ಪರವಾಗಿ ನಮ್ಮನ್ನೆಲ್ಲಾ ಅಗಲಿರುವ ಎಮಿಲಿನೊ ಸಲಾ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ಬಯಸುತ್ತೇವೆ. ಎಳೆಯ ಪ್ರಾಯದಲ್ಲಿ ಜೀವನ ಅಂತ್ಯಗೊಳಿಸಿದ ಎಮಿಲಿನೊ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಮುಂಬರುವ ದಿನಗಳಲ್ಲಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಬೇಕೆಂದು ಅವರ ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತೇವೆ. ಎಮಿಲಿನೊ ಸ್ಮರಣಾರ್ಥ ಕ್ಲಬ್‌ಗಳಲ್ಲಿ ಆಟಗಾರರು ಕೈಗೆ ಕಪ್ಪುಬಟ್ಟೆ ಧರಿಸಿ ಆಡುವ ಆಯ್ಕೆಯನ್ನೂ ನೀಡಲಾಗಿದೆ ಎಂದು ಯುಇಎಫ್‌ಎ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News