ಭಾರತ ಕ್ರೀಡಾ ಪ್ರಾಧಿಕಾರ ಇನ್ನು ಮುಂದೆ ಸ್ಪೋರ್ಟ್ಸ್ ಇಂಡಿಯಾ

Update: 2019-02-12 18:17 GMT

ಹೊಸದಿಲ್ಲಿ, ಫೆ.12:ಭಾರತ ಕ್ರೀಡಾ ಪ್ರಾಧಿಕಾರ(ಸಾಯ್)ವನ್ನು ಸ್ಪೋರ್ಟ್ಸ್ ಇಂಡಿಯಾ ಎಂದು ಸೋಮವಾರ ಅಧಿಕೃತವಾಗಿ ಮರು ನಾಮಕರಣ ಮಾಡಲಾಗಿದೆ. ಶಾಸ್ತ್ರಿ ಭವನದಲ್ಲಿ ಕ್ರೀಡಾ ಸಚಿವಾಲಯ ಹಾಗೂ ಸಾಯ್ ಅಧಿಕಾರಿಗಳ ಮಧ್ಯೆ ಸುದೀರ್ಘ ಸಭೆ ನಡೆದ ಬಳಿಕ ಸಾಯ್‌ಗೆ ‘ಸ್ಪೋಟ್ಸ್‌ರ್  ಇಂಡಿಯಾ’ ಎಂದು ಮರು ನಾಮಕರಣ ಮಾಡಲು ಅನುಮೋದನೆ ನೀಡಲಾಯಿತು.

ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೆಸರು ಬದಲಾವಣೆಯ ಬಗ್ಗೆ ಸೊಸೈಟಿ ರಿಜಿಸ್ಟ್ರಾರ್ ಗಮನಕ್ಕೆ ತರುವ ಕೆಲಸ ಬಾಕಿಯಿದೆ.

ಮುಂಬರುವ ದಿಲ್ಲಿಯಲ್ಲಿ ನಡೆಯುವ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ರೈಫಲ್/ಪಿಸ್ತೂಲ್ ಟೂರ್ನಿಯಲ್ಲಿ ಪಾಕಿಸ್ತಾನಿ ಶೂಟರ್‌ಗಳು ಭಾಗವಹಿಸುವ ಕುರಿತಂತೆ ಇದ್ದ ಅನಿಶ್ಚಿತೆಯ ಕಾರ್ಮೋಡ ತಿಳಿಯಾಗಿದೆ. ದೇಶದ ಗೃಹ ವ್ಯವಹಾರ ಸಚಿವಾಲಯ ಪಾಕ್ ಶೂಟರ್‌ಗಳಾದ ಮುಹಮ್ಮದ್ ಖಲೀಲ್ ಅಖ್ತರ್ ಹಾಗೂ ಗುಲಾಂ ಮುಸ್ತಫ ಬಶೀರ್‌ಗೆ ವೀಸಾ ಅರ್ಜಿಗೆ ಅನುಮೋದನೆ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಚಿವಾಲಯ ಅನುಮೋದನೆ ನೀಡಿರುವ ಬಗ್ಗೆ ಭಾರತೀಯ ಹೈಕಮಿಶನ್‌ಗೆ ತಿಳಿಸಲಾಗಿದೆ.ಶೀಘ್ರವೇ ಇಬ್ಬರು ಶೂಟರ್‌ಗಳು ಹಾಗೂ ಕೋಚ್‌ಗೆ ಹೈಕಮಿಶನ್ ಮುದ್ರೆಯಿರುವ ವೀಸಾ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News