ಅಸಭ್ಯ ಪದ ಬಳಕೆ: ವಿಂಡೀಸ್ ವೇಗಿ ಗೇಬ್ರಿಯಲ್‌ಗೆ ಎಚ್ಚರಿಕೆ

Update: 2019-02-12 18:19 GMT

ಸೈಂಟ್‌ಲೂಸಿಯಾ, ಫೆ.12: ಮೂರನೇ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ನಾಯಕ ಜೋ ರೂಟ್‌ರೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದಾಗ ಕೆಟ್ಟ ಪದ ಪ್ರಯೋಗ ಮಾಡಿದ ವೆಸ್ಟ್‌ಇಂಡೀಸ್ ವೇಗದ ಬೌಲರ್ ಶನೊನ್ ಗೇಬ್ರಿಯಲ್‌ಗೆಮೈದಾನದ ಅಂಪೈರ್‌ಗಳು ಎಚ್ಚರಿಕೆ ನೀಡಿದ್ದಾರೆ.

ಗೇಬ್ರಿಯಲ್ ಆಡಿದ ಮಾತು ಸ್ಟಂಪ್ ಮೈಕ್ರೋಫೋನ್‌ನಲ್ಲಿ ರೆಕಾರ್ಡ್ ಆಗಿಲ್ಲ.ಆದರೆ, ರೂಟ್ ಅವರು ಬೌಲರ್ ಗೇಬ್ರಿಯಲ್‌ಗೆ ‘‘ಸಲಿಂಗಕಾಮಿ ಆಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳುತ್ತಿರುವುದು ಕೇಳಿಬಂದಿದೆ’’ಎಂದು ‘ಗಾರ್ಡಿಯನ್’ ದಿನಪತ್ರಿಕೆ ವರದಿ ಮಾಡಿದೆ.

ಅಂಪೈರ್‌ಗಳಾದ ರಾಡ್ ಟಕರ್ ಹಾಗೂ ಕುಮಾರ ಧರ್ಮಸೇನ ಮಾತಿನ ಚಕಮಕಿ ಬಳಿಕ ಗೇಬ್ರಿಯಲ್ ಬಳಿ ಮಾತನಾಡಿದ್ದಾರೆ.

3ನೇ ದಿನವಾದ ಮಂಗಳವಾರ ಆಟ ಕೊನೆಗೊಂಡಾಗ ಔಟಾಗದೆ 111 ರನ್ ಗಳಿಸಿದ್ದ ರೂಟ್ ಬಳಿ ಘಟನೆಯ ಬಗ್ಗೆ ಕೇಳಿದಾಗ, ‘‘ಅದನ್ನು ಮೈದಾನದಲ್ಲಿ ಬಿಟ್ಟುಬಿಡಬೇಕು. ಇದು ಟೆಸ್ಟ್ ಕ್ರಿಕೆಟ್. ಭಾವನಾತ್ಮಕ ವ್ಯಕ್ತಿಯಾಗಿರುವ ಗ್ಯಾಬ್ರಿಯಲ್ ಟೆಸ್ಟ್ ಪಂದ್ಯ ಗೆಲ್ಲಲು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದ್ದಾರೆ. ಕೆಲವರು ಮೈದಾನದಲ್ಲಿ ಏನೋ ಹೇಳುತ್ತಾರೆ. ಆ ಬಗ್ಗೆ ಅವರಿಗೆ ಪಶ್ಚಾತ್ತಾಪ ಆಗಬಹುದು’’ ಎಂದು ರೂಟ್ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News