ಬಹರೈನ್ ಟಿಟಿ ಓಪನ್: ಭಾರತಕ್ಕೆ 12 ಪದಕ

Update: 2019-02-12 18:20 GMT

ಬಹರೈನ್, ಫೆ.12: ಭಾರತದ ಯುವ ಟೇಬಲ್ ಟೆನಿಸ್ ಆಟಗಾರರು ಬಹರೈನ್ ಜೂನಿಯರ್ ಹಾಗೂ ಕೆಡೆಟ್ ಓಪನ್‌ನಲ್ಲಿಕೊನೆಯ ದಿನವಾದ ಮಂಗಳವಾರ 2 ಚಿನ್ನ, 3 ಬೆಳ್ಳಿ ಹಾಗೂ ಮೂರು ಕಂಚು ಸಹಿತ ಒಟ್ಟು 8 ಪದಕ ಜಯಿಸಿ ಟೂರ್ನಿಯನ್ನು ಯಶಸ್ವಿಯಾಗಿ ಕೊನೆಗೊಳಿಸಿದರು.

ಪ್ರಯಾಸ್ ಜೈನ್ ಬಾಲಕರ ವೈಯಕ್ತಿಕ ವಿಭಾಗದಲ್ಲಿ ಝೆಕ್‌ನ ಸಿಮೊನ್ ಬೆಲಿಕ್‌ರನ್ನು 3-1 ಅಂತರದಿಂದ ಸೋಲಿಸಿ ಪದಕದ ಬೇಟೆಗೆ ಚಾಲನೆ ನೀಡಿದರು. ಕರ್ನಾಟಕದ ಅನರ್ಘ್ಯ ಮಂಜುನಾಥ್ ಅವರು ತಮ್ಮದೇ ದೇಶದ ಯಶಸ್ವಿನಿ ಘೋರ್ಪಡೆಯವರನ್ನು ಫೈನಲ್‌ನಲ್ಲಿ 3-1ರಿಂದ ಸೋಲಿಸಿ ಚಿನ್ನ ಜಯಿಸಿದರು. ಭಾರತ ಟೀಮ್ ಸ್ಪರ್ಧೆಗಳಲ್ಲಿ ಈ ಮೊದಲು 4 ಪದಕಗಳನ್ನು ಜಯಿಸಿದ್ದು, ಇದೀಗ ಮನಾಮಾದಲ್ಲಿ ಒಟ್ಟು 12 ಪದಕ ಜಯಿಸಿದ ಸಾಧನೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News