ಅಮಿತ್ ಭಂಡಾರಿಗೆ ಹಲ್ಲೆ: ಕಳಂಕಿತ ಕ್ರಿಕೆಟಿಗ ಅನುಜ್‌ಗೆ ಆಜೀವ ನಿಷೇಧ

Update: 2019-02-13 17:51 GMT

ಹೊಸದಿಲ್ಲಿ, ಫೆ.13: ಭಾರತದ ಮಾಜಿ ವೇಗದ ಬೌಲರ್ ಹಾಗೂ ದಿಲ್ಲಿ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷ ಅಮಿತ್ ಭಂಡಾರಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕಳಂಕಿತ ಕ್ರಿಕೆಟಿಗ ಅನುಜ್ ದೆಧಾಗೆ ದಿಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಬುಧವಾರ ಆಜೀವ ನಿಷೇಧ ಹೇರಿದೆ.

23 ವರ್ಷದೊಳಗಿನವರ ರಾಜ್ಯ ತಂಡದಲ್ಲಿ ತನ್ನನ್ನು ತಿರಸ್ಕರಿಸಿದ ಕೋಪದಲ್ಲಿ ಅನುಜ್ ಗೂಂಡಾಗಳ ಜೊತೆಗೂಡಿ ಅಂಡರ್-23 ಆಯ್ಕೆ ಸಮಿತಿ ಅಧ್ಯಕ್ಷ ಭಂಡಾರಿ ಮೇಲೆ ಸೋಮವಾರ ಹಾಕಿ ಸ್ಟಿಕ್ಸ್, ಕಬ್ಬಿಣದ ರಾಡ್ ಹಾಗೂ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ಮಾಡಿದ್ದರು. ಹಣೆ, ಕಿವಿ ಹಾಗೂ ಕಾಲಿನ ಭಾಗದಲ್ಲಿ ಗಾಯವಾಗಿದ್ದ ಭಂಡಾರಿಯವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ದಿಲ್ಲಿ ಪೊಲೀಸರು ತಕ್ಷಣವೇ ಅನುಜ್‌ನನ್ನು ಬಂಧಿಸಿದ್ದು, ಆತ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ಹಾಗೂ ಆಯ್ಕೆಗಾರರು ಭಾಗವಹಿಸಿದ್ದ ಸಭೆಯಲ್ಲಿ ದಿಲ್ಲಿಯ ಮಾಜಿ ನಾಯಕ ಹಾಗೂ ಡಿಡಿಸಿಎ ಅಪೆಕ್ಸ್ ಕೌನ್ಸಿಲ್ ಸದಸ್ಯ ಗೌತಮ್ ಗಂಭೀರ್, ಅನುಜ್‌ಗೆಆಜೀವ ನಿಷೇಧ ಹೇರುವಂತೆ ಶಿಫಾರಸು ಮಾಡಿದರು.

ಆಯ್ಕೆಗಾರರು ಹಾಗೂ ಗಂಭೀರ್ ಭಾಗವಹಿಸಿದ್ದ ಸಭೆಯಲ್ಲಿ ಅನುಜ್ ದೆಧಾಗೆ ಆಜೀವ ನಿಷೇಧ ಹೇರುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾನ್ಯ ಮಂಡಳಿ ಸಭೆಯಲ್ಲಿ ಶಿಫಾರಸಿಗೆ ಅನುಮೋದನೆ ಪಡೆಯಲಿದ್ದೇವೆ. ಇನ್ನು ಮುಂದಕ್ಕೆ ಅನುಜ್ ಯಾವುದೇ ಕ್ಲಬ್ ಪಂದ್ಯ ಅಥವಾ ಡಿಡಿಸಿಎಯಿಂದ ಆಯೋಜಿಸಲ್ಪಡುವ ಯಾವುದೇ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುವಂತಿಲ್ಲ’’ ಎಂದು ಶರ್ಮಾ ತಿಳಿಸಿದ್ದಾರೆ.

‘‘ಅನುಜ್‌ಗೆ ಆಜೀವ ನಿಷೇಧ ಹೇರುವ ವಿಚಾರ ಗೌತಮ್ ಅವರ ಯೋಚನೆಯಾಗಿತ್ತು. ಇನ್ನು ಮುಂದೆ ಟ್ರಯಲ್ಸ್ ನಡೆಯುವಾಗ ಆಟಗಾರರ ಹೆತ್ತವರು, ಸಂಬಂಧಿಕರು ಅಥವಾ ಸ್ನೇಹಿತರಿಗೆ ವೀಕ್ಷಿಸಲು ಅವಕಾಶ ನೀಡುವುದಿಲ್ಲ. ಅಂಡರ್-14 ಅಥವಾ ಅಂಡರ್-16 ಆಟಗಾರರಿಗೆ ಮಾತ್ರ ಸ್ಟೇಡಿಯಂ ಆವರಣದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು’’ ಎಂದು ಶರ್ಮಾ ತಿಳಿಸಿದ್ದಾರೆ.

ಅನುಜ್ ಸಹಿತ 50ಕ್ಕೂ ಅಧಿಕ ದಿಲ್ಲಿ ಆಟಗಾರರು ರಾಷ್ಟ್ರೀಯ ಅಂಡರ್-23 ಏಕದಿನ ಕೂಟದಲ್ಲಿ ಭಾಗವಹಿಸಿದ್ದರು. ಆದರೆ, ತಂಡದಲ್ಲಿ ಸ್ಥಾನ ಪಡೆಯದೇ ಇರುವುದಕ್ಕೆ ಅನುಜ್‌ಗೆ ನೋವಾಗಿತ್ತು.

‘‘ಅನುಜ್‌ಟ್ರಯಲ್‌ಪಂದ್ಯದಲ್ಲಿಎರಡುವಿಕೆಟ್‌ಪಡೆದಿದ್ದ. ಅನುಜ್‌ಅವರುಮನ್ಜೋತ್‌ಕಾಲ್ರಾ(ಅಂಡರ್-19 ವಿಶ್ವಕಪ್‌ಸ್ಟಾರ್) ಹಾಗೂಜಾಂಟಿ ಸಿಧು(ಈಗಿನರಣಜಿ ಆಟಗಾರ)ವಿಕೆಟ್‌ಕಬಳಿಸಿದ್ದರು. ಹಾಗಾಗಿ ಅವರನ್ನು50 ಆಟಗಾರರಸಂಭಾವ್ಯಪಟ್ಟಿಯಲ್ಲಿಸೇರಿಸಲಾಗಿತ್ತು. ಅಂತಿಮ-15ರಲ್ಲಿಆಯ್ಕೆಯಾಗುವಬಗ್ಗೆ ಎಲ್ಲಮೂವರುಆಯ್ಕೆಗಾರರುಅನುಜ್‌ಗೆ

ಯಾವುದೇಭರವಸೆನೀಡಿರಲಿಲ್ಲ’’ ಎಂದುಡಿಡಿಸಿಎ ಅಧ್ಯಕ್ಷಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News