ಭಾರತದ ಅಂಡರ್-23 ಫುಟ್ಬಾಲ್ ತಂಡಕ್ಕೆ ಪೆರೇರ ಕೋಚ್

Update: 2019-02-13 18:08 GMT

ಹೊಸದಿಲ್ಲಿ, ಫೆ.13: ಭಾರತದ ಅಂಡರ್-23 ಫುಟ್ಬಾಲ್ ತಂಡದ ಮುಖ್ಯ ಕೋಚ್ ಆಗಿ ಡೆರಿಕ್ ಪೆರೇರ ಬುಧವಾರ ನೇಮಕಗೊಂಡಿದ್ದಾರೆ. ಮಾ.22 ರಿಂದ ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ನಡೆಯುವ ಏಶ್ಯನ್ ಫುಟ್ಬಾಲ್ ಕಾನ್ಫೆಡರೇಶನ್(ಎಎಫ್‌ಸಿ)ಕ್ವಾಲಿಫೈಯರ್‌ನಲ್ಲಿ ಭಾರತ ಭಾಗವಹಿಸಲಿದೆ. ಟೂರ್ನಿಯಲ್ಲಿ ಭಾರತವಲ್ಲದೆ ತಜ್‌ಕಿಸ್ತಾನ ಹಾಗೂ ಪಾಕಿಸ್ತಾನ ತಂಡಗಳಿವೆ.

ಇಂಡಿಯನ್ ಸೂಪರ್ ಲೀಗ್ ಕ್ಲಬ್ ಎಫ್‌ಸಿ ಗೋವಾದ ತಾಂತ್ರಿಕ ನಿರ್ದೇಶಕರಾಗಿರುವ ಪೆರೇರ ಮಾ.2 ರಿಂದ ಗೋವಾದಲ್ಲಿ ಆರಂಭವಾಗಲಿರುವ ಪೂರ್ವತಯಾರಿ ಶಿಬಿರದಲ್ಲಿ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

‘‘ಭಾರತ ತಂಡ ಮಾ.11ರಂದು ದೋಹಾದಲ್ಲಿ ಖತರ್ ಅಂಡರ್-23 ರಾಷ್ಟ್ರೀಯ ತಂಡದ ವಿರುದ್ಧ ಸೌಹಾರ್ದ ಪಂದ್ಯವನ್ನು ಆಡಲಿದೆ’’ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ತಿಳಿಸಿದೆ.

ಪೆರೇರಗೆ ಅಭಿನಂದನೆ ಸಲ್ಲಿಸಿದ ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್, ‘‘ಅವರ ಅನುಭವ ಅಂಡರ್-23 ತಂಡಕ್ಕೆ ನೆರವಾಗಲಿದೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News