ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಪತ್ನಿಗೆ ಸಂದರ್ಶನ ನೀಡಿದ ಗಪ್ಟಿಲ್!

Update: 2019-02-14 18:17 GMT

ಹ್ಯಾಮಿಲ್ಟನ್, ಫೆ.14: ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ ಮಧ್ಯೆ ಬುಧವಾರ ನಡೆದ ಮೊದಲ ಅಂತರ್‌ರಾಷ್ಟ್ರೀಯ ಏಕದಿನ ಪಂದ್ಯ ಅಪರೂಪದ ದೃಶ್ಯವೊಂದಕ್ಕೆ ಸಾಕ್ಷಿಯಾಯಿತು. ಕಿವೀಸ್‌ನ ಅಗ್ರ ಸರದಿ ದಾಂಡಿಗ ಮಾರ್ಟಿನ್ ಗಪ್ಟಿಲ್ ಪಂದ್ಯ ಬಳಿಕ ನಡೆದ ಪ್ರಶಸ್ತಿ ಸಮಾರಂಭದ ಬಳಿಕ ತನ್ನ ಪತ್ನಿಗೆ ಸಂದರ್ಶನ ನೀಡಿದರು.

ನೇಪಿಯರ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಆರಂಭಿಕ ಆಟಗಾರನಾಗಿ 116 ಎಸೆತಗಳಲ್ಲಿ ಔಟಾಗದೆ 117 ರನ್ ಗಳಿಸಿದ ಗಪ್ಟಿಲ್ ನ್ಯೂಝಿಲೆಂಡ್ 8 ವಿಕೆಟ್‌ಗಳಿಂದ ಜಯ ಸಾಧಿಸಲು ನೆರವಾಗಿದ್ದರು. ಶತಕ ಸಿಡಿಸಿದ್ದ 32ರ ಹರೆಯದ ಗಪ್ಟಿಲ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ತನ್ನ ಪತ್ನಿ, ಕ್ರೀಡಾ ನಿರೂಪಕಿ ಲೌರಾ ಮೆಕ್‌ಗೋಲ್ಡ್ರಿಕ್‌ಗೆ ಸಂದರ್ಶನ ನೀಡಿದರು.

‘ಇದಕ್ಕಿಂತ ಉತ್ತಮವಾದುದು ಬೇರೇನಿದೆ?ಮಾರ್ಟಿನ್ ಗಪ್ಟಿಲ್‌ಗೆ ಕೇಕ್ ಮೇಲೆ ಸಕ್ಕರೆ ಹಾಕಿದಂತಾಗಿದೆ. ಗಪ್ಟಿಲ್‌ರನ್ನು ಅವರ ಪತ್ನಿಯೇ ಸಂದರ್ಶನ ಮಾಡಿದ್ದಾರೆ. ಅವರ ಮಾತಿನಲ್ಲಿ ಶುದ್ಧ ಕ್ರಿಕೆಟ್ ಅಭಿಮಾನವಿತ್ತು’’ಎಂದು ಧೋನಿಯ ಅಭಿಮಾನಿ ಶ್ರೇಯಸ್ ಪಾಟೀಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News