ಜಾರ್ಖಂಡ್ ಕ್ರಿಕೆಟ್ ಸ್ಟೇಡಿಯಂನ ಪೆವಿಲಿಯನ್‌ಗೆ ಎಂ.ಎಸ್. ಧೋನಿ ಹೆಸರು?

Update: 2019-02-14 18:19 GMT

ರಾಂಚಿ, ಫೆ.14: ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಗೌರವ ನೀಡುವ ಉದ್ದೇಶದಿಂದ ರಾಂಚಿಯಲ್ಲಿರುವ ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಶನ್(ಜೆಎಸ್‌ಸಿಎ)ಸ್ಟೇಡಿಯಂನ ಪೆವಿಲಿಯನ್‌ವೊಂದಕ್ಕೆ ಧೋನಿಯ ಹೆಸರನ್ನು ಇಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಸಾಮಾಜಿಕ ಮಾಧ್ಯಮ ವರದಿಯ ಪ್ರಕಾರ, ಜೆಸಿಎಸ್‌ಎ ಸ್ಟೇಡಿಯಂನ ದಕ್ಷಿಣ ಸ್ಟಾಂಡ್‌ಗೆ ‘‘ಎಂಎಸ್ ಧೋನಿ ಪೆವಿಲಿಯನ್’’ಎಂದು ಹೆಸರಿಸಲಾಗುವುದು. ಈ ಕುರಿತು ಜಾಹೀರಾತನ್ನು ಈಗಾಗಲೇ ಅಳವಡಿಸಲಾಗಿದೆ.

ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆಯುವ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಬಿಸಿಸಿಐ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಘೋಷಿಸುವ ಕೆಲವೇ ದಿನಗಳ ಮೊದಲು ಈ ವರದಿ ಹೊರ ಬಂದಿದೆ.ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಧೋನಿ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಭಾರತ-ಆಸ್ಟ್ರೇಲಿಯದ ಮಧ್ಯೆ 3ನೇ ಏಕದಿನ ಮಾ.8 ರಂದು ಧೋನಿಯ ತವರುಪಟ್ಟಣ ರಾಂಚಿಯಲ್ಲಿ ನಡೆಯಲಿದೆ. ಮೇನಲ್ಲಿ ನಡೆಯುವ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ 37ರ ಹರೆಯದ ಧೋನಿ ಅತ್ಯಂತ ಪ್ರಮುಖ ಆಟಗಾರನಾಗಿದ್ದಾರೆ ಎಂದು ಇತ್ತೀಚೆಗೆ ಮುಖ್ಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News