ಆಶೀಶ್ ಕುಮಾರ್ ಸ್ಪರ್ಧೆ

Update: 2019-02-15 18:05 GMT

ಗುವಾಹಟಿ,ಫೆ.15: ಏಶ್ಯನ್ ಗೇಮ್ಸ್‌ನಲ್ಲಿ ಕಂಚು ಪದಕ ವಿಜೇತ ಜಿಮ್ನಾಸ್ಟ್ ಆಶೀಶ್ ಕುಮಾರ್ ದೋಹಾ ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದಾರೆ. ಆದರೆ, ಸರಿಯಾದ ಸಮಯಕ್ಕೆ ಪ್ರವೇಶ ಪತ್ರ ಪಡೆಯಲು ವಿಫಲವಾದ ಕಾರಣ ಬಾಕು ವಿಶ್ವಕಪ್‌ನಿಂದ ವಂಚಿತರಾಗಿದ್ದಾರೆ.

ಆಶೀಶ್, ಏಶ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊತ್ತ ಮೊದಲ ಜಿಮ್ನಾಸ್ಟ್. 29ರ ಹರೆಯದ ಅಲಹಾಬಾದ್‌ನ ಜಿಮ್ನಾಸ್ಟ್ ಆಶೀಶ್ 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಫ್ಲೋರ್ ಎಕ್ಸ್‌ಸೈಸ್‌ನಲ್ಲಿ ಕಂಚು ಹಾಗೂ ವೋಲ್ಟ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ‘‘ದೋಹಾ ವಿಶ್ವಕಪ್ ಸ್ಪರ್ಧೆ ಕಠಿಣವಾಗಿದೆ. ಅ.4 ರಿಂದ 13ರ ತನಕ ಸ್ಟಟ್‌ಗರ್ಟ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿರುವೆ. ಅಂತರ್‌ರಾಷ್ಟ್ರೀಯ ಜಿಮ್ನಾಸ್ಟ್ ಫೆಡರೇಶನ್ ಎಲ್ಲ ಸ್ಪರ್ಧೆಗಳಲ್ಲಿ ಅಂಕದ ನಿಯಮ ಬದಲಿಸುತ್ತದೆ. ವಿಶ್ವಕಪ್‌ನಲ್ಲಿ ಚಿನ್ನ ಜಯಿಸಿದರೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವುದು ಕಷ್ಟಕರ. ಹೀಗಾಗಿ ನಾನು ಪ್ರಾಥಮಿಕವಾಗಿ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯುವ ಗುರಿ ಹಾಕಿಕೊಂಡಿದ್ದೇನೆ’’ ಎಂದು ಸುದ್ದಿಸಂಸ್ಥೆಗೆ ಆಶೀಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News