ಬೌಲ್ಟ್, ಮಹ್ಮೂದುಲ್ಲಾಗೆ ದಂಡ

Update: 2019-02-17 18:15 GMT

ಕ್ರೈಸ್ಟ್‌ಚರ್ಚ್, ಫೆ.17: ಶನಿವಾರ ಇಲ್ಲಿ ಬಾಂಗ್ಲಾ ಹಾಗೂ ನ್ಯೂಝಿಲೆಂಡ್ ತಂಡಗಳ ಮಧ್ಯೆ ನಡೆದ ಎರಡನೇ ಅಂತರ್‌ರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಕ್ರಿಕೆಟ್ ನಿಯಮಗಳನ್ನು ಉಲ್ಲಂಘಿಸಿದ ಅಪರಾಧದ ಮೇಲೆ ನ್ಯೂಝಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಹಾಗೂ ಬಾಂಗ್ಲಾ ಆಲ್‌ರೌಂಡರ್ ಮಹ್ಮೂದುಲ್ಲಾಗೆ ದಂಡ ವಿಧಿಸಲಾಗಿದೆ.

ಬೌಲ್ಟ್ ಅವರಿಗೆ ‘ಅನುಚಿತ ಮಾತು’ ಆಡಿದ ಅಪರಾಧಕ್ಕಾಗಿ ಪಂದ್ಯದ ಶೇ.15ರಷ್ಟು ದಂಡ ಹಾಗೂ ಮಹ್ಮೂದುಲ್ಲಾ ಅವರಿಗೆ ಬೌಂಡರಿ ಗೆರೆ ಹಗ್ಗಕ್ಕೆ ಬ್ಯಾಟ್‌ನಿಂದ ಹೊಡೆದು ಅಗೌರವ ತೋರಿದ ಕಾರಣಕ್ಕೆ ಪಂದ್ಯದ ಶೇ.10ರಷ್ಟು ದಂಡ ವಿಧಿಸಲಾಗಿದೆ ಎಂದು ರವಿವಾರ ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಉಭಯ ಆಟಗಾರರು ಶಿಸ್ತು ಕಡತಗಳಲ್ಲಿನ ತಮ್ಮ ಮೊದಲ ಅಪರಾಧಕ್ಕಾಗಿ ಒಂದು ಡೀಮೆರಿಟ್ ಅಂಕ ಪಡೆದಿದ್ದಾರೆ. ಕಿವೀಸ್ ತಂಡ ಈ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಬುಧವಾರ ಡ್ಯುನೆಡಿನ್‌ನಲ್ಲಿ ಮೂರನೇ ಹಾಗೂ ಕೊನೆಯ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News