ವಿಂಡೀಸ್ ತಂಡಕ್ಕೆ ಕ್ಯಾಂಪ್‌ಬೆಲ್ ಸೇರ್ಪಡೆ

Update: 2019-02-17 18:23 GMT

ಕಿಂಗ್‌ಸ್ಟನ್, ಫೆ.17: ಮುಂದಿನ ವಾರ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಮೊದಲ ಎರಡು ಏಕದಿನ ಪಂದ್ಯಗಳಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಜಾನ್ ಕ್ಯಾಂಪ್‌ಬೆಲ್, ಕಾರ್ಲೊಸ್ ಬ್ರಾತ್‌ವೇಟ್ ಹಾಗೂ ಶೆಲ್ಡನ್ ಜಾಕ್ಸನ್‌ಗೆ ಸ್ಥಾನ ಕಲ್ಪಿಸಲಾಗಿದೆ.

ಆರಂಭಿಕ ದಾಂಡಿಗ ಎವಿನ್ ಲೆವಿಸ್ ಹಾಗೂ ಆಲ್‌ರೌಂಡರ್‌ಗಳಾದ ಕೀಮೊ ಪಾಲ್ ಹಾಗೂ ರೊವ್‌ಮನ್ ಪೋವೆಲ್ ಅವರು ಗಾಯಗೊಂಡ ಕಾರಣ 14 ಸದಸ್ಯರ ತಂಡದಲ್ಲಿ ಈ ಬದಲಾವಣೆ ಮಾಡಲಾಗಿದೆ.

ಸೀಮಿತ ಓವರ್‌ಗಳ ವಿಭಾಗದಲ್ಲಿ ಕ್ಯಾಂಪ್‌ಬೆಲ್‌ಗೆ ಇದು ರಾಷ್ಟ್ರೀಯ ತಂಡಕ್ಕೆ ಮೊದಲ ಕರೆಯಾಗಿದೆ. 25 ವರ್ಷದ ಕ್ಯಾಂಪ್‌ಬೆಲ್ ಇತ್ತೀಚೆಗಷ್ಟೇ ಮುಗಿದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಸರಣಿಯನ್ನು ವಿಂಡೀಸ್ 2-1ರಿಂದ ಗೆದ್ದುಕೊಂಡಿತ್ತು. ಈ ಸರಣಿಯಲ್ಲಿ ಅವರು 35.2ರ ಸರಾಸರಿಯಲ್ಲಿ 176 ರನ್ ಕಲೆ ಹಾಕಿದ್ದಾರೆ. ಸರಣಿಯ ಮೊದಲ ಎರಡು ಪಂದ್ಯಗಳು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಬುಧವಾರ ಹಾಗೂ ಶುಕ್ರವಾರ ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News