5 ಪದಕ ಖಚಿತಪಡಿಸಿದ ಭಾರತೀಯರು

Update: 2019-02-17 18:26 GMT

ಸೋಫಿಯ(ಬಲ್ಗೇರಿಯ), ಫೆ.17: ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಅಮಿತ್ ಪಂಗಲ್ ಈ ಋತುವನ್ನು ಉತ್ತಮವಾಗಿ ಆರಂಭಿಸಿದ್ದು ಅವರೊಂದಿಗೆ ಭಾರತದ ಬಾಕ್ಸರ್‌ಗಳು ಇಲ್ಲಿ ನಡೆಯುತ್ತಿರುವ 70ನೇ ಸ್ಟ್ರಾಂಡ್‌ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯಲ್ಲಿ ರವಿವಾರ 5 ಪದಕಗಳನ್ನು ಖಚಿತಪಡಿಸಿದ್ದಾರೆ. 49 ಕೆ.ಜಿ. ವಿಭಾಗದಲ್ಲಿ ಉಕ್ರೇನ್‌ನ ಕುರೊಚ್ಯಾನ್ ಅವರನ್ನು 3-2 ಅಂಕಗಳ ಅಂತರದಿಂದ ಮಣಿಸಿದ ಅಮಿತ್ ಪಂಗಲ್‌ಸೆಮಿಫೈನಲ್‌ನಲ್ಲಿ ಸ್ಥಾನ ಹಾಗೂ ಪದಕವನ್ನು ಖಚಿತಪಡಿಸಿದ್ದಾರೆ.

ಪ್ರತಿಷ್ಠಿತ ಟೂರ್ನಿಯ ಮೂರನೇ ದಿನ ಭಾರತದ ಮಹಿಳಾ ಬಾಕ್ಸರ್‌ಗಳೂ 4 ಪದಕಗಳನ್ನು ಖಚಿತಪಡಿಸಿದ್ದಾರೆ. ಲವ್ಲಿನಾ ಬೋರ್ಗೇನ್(69 ಕೆ.ಜಿ. ವಿಭಾಗ) ಬ್ರೆಝಿಲ್‌ನ ಸೋರೆಝ್ ಬಿಯಾಟ್ರಿಝ್ ಅವರನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. 48 ಕೆ.ಜಿ. ವಿಭಾಗದಲ್ಲಿ ಯುವ ಬಾಕ್ಸರ್ ಮಂಜು ರಾಣಿ ಅವರು ಇಟಲಿಯ ಬೊನಾಟಿ ರಾಬರ್ಟಾ ಅವರನ್ನು ಮಣಿಸಿ ಸೆಮಿಫೈನಲ್ ತಲುಪಿದರು.

ನಿಖತ್ ಝರೀನ್ (51 ಕೆ.ಜಿ. ವಿಭಾಗ) ಬುರ್ಯಾಮ್ ಯಾನಾ ಅವರನ್ನು ಮಣಿಸಿ ಹಾಗೂ ನೀರಜ್ ಅವರು ಅಮೆರಿಕದ ಅಮೇಲಿಯಾ ಮೂರ್ ಅವರನ್ನು ಮಣಿಸಿ ಸೆಮಿಫೈನಲ್‌ನಲ್ಲಿ ಸ್ಥಾನ ಹಾಗೂ ಪದಕಗಳನ್ನು ಖಚಿತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News