ದ್ವಿತೀಯ ಸ್ಥಾನಕ್ಕೆ ಮರಳಿದ ಸಿಮೊನಾ ಹಾಲೆಪ್

Update: 2019-02-18 18:10 GMT

►ಅಗ್ರ 10ರಲ್ಲಿ ಸೆರೆನಾ ವಿಲಿಯಮ್ಸ್

ಪ್ಯಾರಿಸ್, ಫೆ.18: ಖತರ್ ಓಪನ್ ಫೈನಲ್‌ನವರೆಗೂ ಸಾಗಿದ ಹಿನ್ನೆಲೆಯಲ್ಲಿ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿರುವ ರೋಮೆನಿಯಾ ಟೆನಿಸ್ ತಾರೆ ಸಿಮೊನಾ ಹಾಲೆಪ್ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಸೋಮವಾರ ವಿಶ್ವ ಟೆನಿಸ್ ಮಂಡಳಿ ನೂತನ ರ್ಯಾಂಕಿಂಗ್ ಪ್ರಕಟಿಸಿದ್ದು, ದೋಹಾದಲ್ಲಿ ಪ್ರಶಸ್ತಿ ವಿಜೇತ ಎಲಿಸ್ ಮೆರ್ಟೆನ್ಸ್ ಅಗ್ರ 20ರೊಳಗೆ ಜಿಗಿದಿದ್ದಾರೆ.

ಹಾಲೆಪ್ ಒಂದು ಸ್ಥಾನ ಏರಿಕೆ ಕಂಡಿದ್ದು, ಆಸ್ಟ್ರೇಲಿಯನ್ ಓಪನ್ ರನ್ನರ್‌ಅಪ್ ಪೆಟ್ರಾ ಕ್ವಿಟೊವಾ ಎರಡು ಸ್ಥಾನ ಇಳಿಕೆ ಕಂಡು 4ನೇ ಸ್ಥಾನಕ್ಕೆ ಜಾರಿದ್ದಾರೆ. ಮೆಲ್ಬೋರ್ನ್‌ನಲ್ಲಿ 16ರ ಘಟ್ಟದ ಸೋಲಿನ ಬಳಿಕ ಯಾವುದೇ ಪಂದ್ಯ ಆಡದಿದ್ದರೂ ಅಮೆರಿಕದ ಸ್ಲೊವಾನ್ ಸ್ಟೀಫನ್ಸ್ ಜೀವನಶ್ರೇಷ್ಠ 3ನೇ ಸ್ಥಾನ ತಲುಪಿದ್ದಾರೆ.

ಜಪಾನ್‌ನ ನವೊಮಿ ಒಸಾಕಾ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, 2017 ಜುಲೈ ನಂತರ ಮೊದಲ ಬಾರಿಗೆ ಅಮೆರಿಕದ ಸೆರೆನಾ ವಿಲಿಯಮ್ಸ್(10) ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.

ಖತರ್ ಓಪನ್ ಫೈನಲ್‌ನಲ್ಲಿ ಹಾಲೆಪ್‌ಗೆ ಮಣ್ಣುಮುಕ್ಕಿಸಿದ್ದ ಬೆಲ್ಜಿಯಂ ತಾರೆ ಮೆರ್ಟೆನ್ಸ್ 16ನೇ ಸ್ಥಾನ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News