×
Ad

ಮಾರ್ಕೊ ಸೆಚಿನ್ಯಾಟೊಗೆ ಅರ್ಜೆಂಟೀನ ಓಪನ್ ಗರಿ

Update: 2019-02-18 23:46 IST

ಬ್ಯೂನಸ್‌ಐರಿಸ್, ಫೆ.18: ಅರ್ಜೆಂಟೀನ ಫೇವರಿಟ್ ಆಟಗಾರ ಡಿಯಾಗೊ ಸ್ವಾರ್ಟ್ಝ್‌ಮನ್ ಸವಾಲನ್ನು ಹತ್ತಿಕ್ಕಿದ ಇಟಲಿಯ ಮಾರ್ಕೊ ಸೆಚಿನ್ಯಾಟೊ ಅರ್ಜೆಂಟೀನ ಓಪನ್ ಟೆನಿಸ್ ಪ್ರಶಸ್ತ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಅವರು 6-1, 6-2 ಸೆಟ್‌ಗಳ ಅಂತರದಿಂದ ಡಿಯಾಗೊ ಅವರಿಗೆ ಮಣ್ಣುಮುಕ್ಕಿಸಿದರು.

ಒಂದು ತಾಸಿಗಿಂತ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ವಿಶ್ವದ ನಂ.18 ಆಟಗಾರ ಸೆಚಿನ್ಯಾಟೊ ತಮ್ಮ ಮೂರನೇ ಎಟಿಪಿ ಪ್ರಶಸ್ತಿಗೆ ಕೊರಳೊಡ್ಡಿದರು.

ಬ್ಯೂನಸ್‌ಐರಿಸ್ ಸಂಜಾತ ಡಿಯಾಗೊ ತವರು ಪ್ರೇಕ್ಷಕರ ಭಾರೀ ಬೆಂಬಲದ ಒತ್ತಡದ ನಡುವೆ ಆಡಿದರು. ಒಂದು ಹಂತದಲ್ಲಿ ಸತತ 7 ಗೇಮ್‌ಗಳನ್ನು ಕಳೆದುಕೊಂಡರು.

ಈ ವಾರದಲ್ಲಿ ಒಂದೂ ಸೆಟ್‌ನ್ನು ಕಳೆದುಕೊಳ್ಳದೆ ಸೆಚಿನ್ಯಾಟೊ ಜಯದ ತೋರಣ ಕಟ್ಟಿದ್ದಾರೆ. ಕಳೆದ ವರ್ಷ ಉಮಂಗ್ ಹಾಗೂ ಬುಡಾಪೆಸ್ಟ್‌ನಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News