ಐರ್ಲೆಂಡ್ ವಿರುದ್ಧ ಭಾರತದಲ್ಲಿ ಟಿ-20, ಏಕದಿನ ಸರಣಿ ಆಡಲಿರುವ ಅಫ್ಘಾನಿಸ್ತಾನ

Update: 2019-02-19 17:59 GMT

ಡೆಹ್ರಾಡೂನ್, ಫೆ.19: ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳು ಫೆ.21ರಿಂದ ಮಾ.19ರ ತನಕ ಭಾರತದಲ್ಲಿ ಮೂರು ಟಿ20 ಹಾಗೂ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ. ಟಿ20 ಪಂದ್ಯಗಳಿಂದ ಸರಣಿ ಆರಂಭವಾಗಲಿದ್ದು, ಫೆ.21ರಂದು ಗುರುವಾರ ಮೊದಲ ಪಂದ್ಯ ಡೆಹ್ರಾಡೂನ್‌ನ ರಾಜೀವ್ ಗಾಂಧಿ ಅಂತರ್‌ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಐರ್ಲೆಂಡ್ ಹಾಗೂ ಅಫ್ಘಾನಿಸ್ತಾನ ಪರಸ್ಪರ ಎರಡನೇ ಬಾರಿ ಸರಣಿಯನ್ನು ಆಡಲಿವೆ.

ಈ ವರ್ಷದ ಸರಣಿ ಉಭಯ ತಂಡಗಳ ಅತ್ಯುತ್ತಮ ಪ್ರದರ್ಶನವನ್ನು ತೋರ್ಪಡಿಸಲಿದೆ. ಕಳೆದ ವರ್ಷದ ಸರಣಿಯಲ್ಲಿ ಅಗ್ರ ವಿಕೆಟ್ ಪಡೆದ ಬೌಲರ್‌ಗಳಾಗಿ ಮಿಂಚಿದ್ದ ಐರ್ಲೆಂಡ್‌ನ ಟಿಮ್ ಮುರ್ಟಗ್ ಹಾಗೂ ಅಫ್ಘನ್‌ನ ರಶೀದ್‌ಖಾನ್ ಈ ಬಾರಿಯೂ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಸರಣಿಯಲ್ಲಿ ಉಭಯ ತಂಡಗಳ ಗರಿಷ್ಠ ಸ್ಕೋರರ್‌ಗಳಾದ ಐರ್ಲೆಂಡ್‌ನ ಆ್ಯಂಡ್ರೂ ಬಲ್ಬೈರ್ನ್ ಹಾಗೂ ಅಫ್ಘಾನಿಸ್ತಾನದ ರಹಮತ್ ಶಾ ಈ ಸರಣಿಯಲ್ಲಿ ತಮ್ಮ ತಂಡಗಳ ಬ್ಯಾಟಿಂಗ್ ಸರದಿಯನ್ನು ಬಲಿಷ್ಠಗೊಳಿಸಲಿದ್ದಾರೆ.

ಕಳೆದ ಸರಣಿಯಲ್ಲಿ ಆತಿಥ್ಯ ವಹಿಸಿದ್ದ ಐರ್ಲೆಂಡ್ ತಂಡ ಅಫ್ಘಾನಿಸ್ತಾನ ತಂಡವನ್ನು ಟಿ-20 ಹಾಗೂ ಏಕದಿನ ಸರಣಿಗಳಲ್ಲಿ ಸೋಲಿಸಿತ್ತು. ಈಗ ಅಫ್ಘಾನಿಸ್ತಾನ ತಂಡ ಆತಿಥ್ಯ ವಹಿಸಿಕೊಂಡಿದ್ದು, ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಯೋಜಿಸಿದೆ.

ಮೊದಲ ಎರಡು ಟಿ20 ಪಂದ್ಯಗಳು ಹಾಗೂ ಪ್ರಥಮ, ತೃತೀಯ ಮತ್ತು ನಾಲ್ಕನೇ ಏಕದಿನ ಪಂದ್ಯಗಳನ್ನು ಡಿಸ್ಪೋರ್ಟ್ಸ್ ನೇರಪ್ರಸಾರ ಮಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News