ದುಬೈ ಟೂರ್ನಿಯಿಂದ ವೋಝ್ನಿಯಾಕಿ ಹೊರಕ್ಕೆ
ದುಬೈ, ಫೆ.19: ಮಾಜಿ ವಿಶ್ವ ನಂ.1 ಟೆನಿಸ್ ತಾರೆ ಡೆನ್ಮಾರ್ಕ್ ನ ಕರೋಲಿನಾ ವೋಝ್ನ್ನ್ನಿಯಾಕಿ ಸೋಂಕು ಜ್ವರದ ಹಿನ್ನೆಲೆಯಲ್ಲಿ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದಾರೆ. ಸ್ವಿಟ್ಝರ್ಲೆಂಡ್ ಸ್ಟೆಫಾನಿ ವೊಗೇಲ್ ವಿರುದ್ಧದ ಪ್ರಥಮ ಸುತ್ತಿನ ಪಂದ್ಯಕ್ಕೂ ಮುನ್ನ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. 2011ರ ದುಬೈ ಓಪನ್ ಚಾಂಪಿಯನ್ ಆಗಿದ್ದ ಅವರಿಗೆ ಕ್ರಿಸ್‌ಮಸ್‌ನ ಅವಧಿಯಲ್ಲಿ ಈ ನೋವು ಬಾಧಿಸಿದ್ದು, ಆಸ್ಟ್ರೇಲಿಯನ್ ಓಪನ್‌ವರೆಗೂ ಮುಂದುವರಿದಿತ್ತು. ಈ ಕಾರಣಕ್ಕೆ ಅವರು ಕಳೆದ ವಾರ ಖತರ್ ಓಪನ್‌ನಲ್ಲಿಯೂ ಪಾಲ್ಗೊಂಡಿರಲಿಲ್ಲ. ಈ ವರ್ಷದ ಆಸ್ಟ್ರೇಲಿಯನ್ ಓಪನ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ರಶ್ಯದ ಮರಿಯಾ ಶರಪೋವಾಗೆ ಸೋಲುವ ಮೂಲಕ ವೋಝ್ನ್ನ್ನಿಯಾಕಿ ಪ್ರಶಸ್ತಿ ಉಳಿಸಿಕೊಳ್ಳಲು ವಿಫಲವಾಗಿದ್ದರು. ಟೂರ್ನಿಯಲ್ಲಿ ದೋಹಾ ಓಪನ್ ಚಾಂಪಿಯನ್ ಮೆರ್ಟೆನ್ಸ್ ಮೂರು ತಾಸುಗಳ ಸುದೀರ್ಘ ಹೋರಾಟದಲ್ಲಿ ಚೀನಾದ 107ನೇ ರ್ಯಾಂಕಿನ ಆಟಗಾರ್ತಿ ಝು ಲಿನ್ ವಿರುದ್ಧ 5-7, 4-6, 5-7 ಸೆಟ್‌ಗಳಿಂದ ಸೋಲು ಅನುಭವಿಸಿದರು.