ರಿಷಭ್ ಪಂತ್ ನನ್ನ ಪ್ರತಿ ಸ್ಪರ್ಧಿಯಲ್ಲ: ಸಹಾ

Update: 2019-02-19 18:21 GMT

ಕೋಲ್ಕತಾ, ಫೆ.19: ರಿಷಭ್ ಪಂತ್ ನನ್ನ ಸ್ಪರ್ಧಿ ಎಂದು ನಾನು ಪರಿಗಣಿಸಿಲ್ಲ ಎಂದು ಎಂ.ಎಸ್. ಧೋನಿ ನಿವೃತ್ತಿಯ ಬಳಿಕ ಟೀಮ್ ಇಂಡಿಯಾದ ಖಾಯಂ ವಿಕೆಟ್‌ಕೀಪರ್ ಆಗಿದ್ದ ವೃದ್ಧಿಮಾನ್ ಸಹಾ ಹೇಳಿದ್ದಾರೆ.

ಕಳೆದ ವರ್ಷ ಐಪಿಎಲ್ ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಆಡುತ್ತಿದ್ದಾಗ ಸಹಾಗೆ ಭುಜನೋವು ಕಾಣಿಸಿಕೊಂಡಿತ್ತು. ಸಹಾ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಛಾಪು ಮೂಡಿಸಿದ್ದರು.

‘‘ನಾನು ತಂಡದಿಂದ ಹೊರಗಿದ್ದಾಗ ಪಂತ್ ಅವಕಾಶ ಪಡೆದಿದ್ದರು. ಎಲ್ಲರಂತೆಯೇ ಅವರು ಕೂಡ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದರು. ಅವರು ನನ್ನ ಸ್ಪರ್ಧಿ ಎಂಬ ದೃಷ್ಟಿಯಲ್ಲಿ ನೋಡಲಾರೆ. ಅವರು ಎನ್‌ಸಿಎಗೆ ಬಂದ ಸಂದರ್ಭದಲ್ಲಿ ನಾವು ಸಾಕಷ್ಟು ಸಮಯ ಕಳೆದಿದ್ದೇವೆ. ಪ್ರದರ್ಶನ ಹಾಗೂ ಆಯ್ಕೆಯ ಬಗ್ಗೆ ನಮಗೆ ಹೇಳಲು ಸಾಧ್ಯವಾಗುವುದಿಲ್ಲ’’ ಎಂದು ಸಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News