ಟಿ20 ಇತಿಹಾಸದಲ್ಲಿ ದಾಖಲೆ ಬರೆದ ಅಫ್ಘಾನಿಸ್ತಾನ: 278 ರನ್ !

Update: 2019-02-23 15:29 GMT

ಹೊಸದಿಲ್ಲಿ, ಫೆ.23: ಟಿ20 ಇತಿಹಾಸದಲ್ಲೇ ಹೊಸ ದಾಖಲೆ ಬರೆದಿರುವ ಅಫ್ಘಾನಿಸ್ತಾನ ತಂಡವು ಅತೀ ಹೆಚ್ಚು ರನ್ ಗಳಿಸಿದ ತಂಡವಾಗಿ ಸಾಧನೆ ಮಾಡಿದೆ. ಈ ಹಿಂದೆ ಈ ದಾಖಲೆ ಆಸ್ಟ್ರೇಲಿಯಾದ ಹೆಸರಿನಲ್ಲಿದ್ದು, ಆಸೀಸ್ 263 ರನ್ ಗಳಿಸಿತ್ತು.

ಆರಂಭದಿಂದಲೇ ಐರ್ ಲ್ಯಾಂಡ್ ವಿರುದ್ಧದ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಅಫ್ಘಾನ್ ಆಟಗಾರರು ಸಿಕ್ಸರ್ ಬೌಂಡರಿಗಳ ಸುರಿಮಳೆಗೈದರು.

ಅಫ್ಘಾನ್ ಪರ ಹಝ್ರತುಲ್ಲಾ ಝಝಾಯ್, 62 ಎಸೆತಗಳಲ್ಲಿ 11 ಬೌಂಡರಿ, 19 ಸಿಕ್ಸರ್ ನೆರವಿನಿಂದ 162 ರನ್ ಗಳಿಸಿದರು. ಅವರಿಗೆ ಸಾಥ್ ನೀಡಿದ ಉಸ್ಮಾನ್ ಘನಿ 48 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ನೆರವಿನಿಂದ 73 ರನ್ ಗಳಿಸಿದರು.

ಐರ್ ಲ್ಯಾಂಡ್ 20 ಓವರ್ ಗಳಲ್ಲಿ 279 ರನ್ ಗಳಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News