ಎರಡನೇ ಟ್ವೆಂಟಿ-20: ಆಸ್ಟ್ರೇಲಿಯ ಗೆಲುವಿಗೆ 191ರನ್ ಗುರಿ

Update: 2019-02-27 15:14 GMT

ಬೆಂಗಳೂರು,ಫೆ.27: ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧಶತಕದ ಕೊಡುಗೆ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯ ತಂಡಕ್ಕೆ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದ ಗೆಲುವಿಗೆ 191 ರನ್ ಗುರಿ ನೀಡಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ. ಇನಿಂಗ್ಸ್ ಆರಂಭಿಸಿದ ‘ಲೋಕಲ್ ಹೀರೊ’ ಕೆಎಲ್ ರಾಹುಲ್(47) ಹಾಗೂ ಶಿಖರ್ ಧವನ್(14)ಮೊದಲ ವಿಕೆಟ್‌ಗೆ 61 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು. ಈ ಜೋಡಿಯನ್ನು ಬೆಹ್ರನ್‌ಡಾರ್ಫ್ ಬೇರ್ಪಡಿಸಿದರು.

ಧವನ್(14) ಹಾಗೂ ರಿಷಭ್ ಪಂತ್(1) ಲಭಿಸಿದ ಅವಕಾಶ ಬಳಸಿಕೊಳ್ಳಲು ವಿಫಲರಾದರು.

ಆಗ ಜೊತೆಯಾದ ಕೊಹ್ಲಿ ಹಾಗೂ ಧೋನಿ(40,23 ಎಸೆತ, 3 ಬೌಂಡರಿ, 3 ಸಿಕ್ಸರ್) 4ನೇ ವಿಕೆಟ್‌ಗೆ ಬರೋಬ್ಬರಿ 100 ರನ್ ಸೇರಿಸಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು. ಕೊಹ್ಲಿ ಔಟಾಗದೆ 72 ರನ್(38 ಎಸೆತ, 2 ಬೌಂಡರಿ, 6 ಸಿಕ್ಸರ್) ಹಾಗೂ ದಿನೇಶ್ ಕಾರ್ತಿಕ್ ಔಟಾಗದೆ 8 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News