ಹರ್ಕಝ್ ವಿರುದ್ಧ ನಿಶಿಕೋರಿಗೆ ಆಘಾತ
Update: 2019-02-27 23:41 IST
ದುಬೈ, ಫೆ.27: ಪೋಲೆಂಡ್ ಕ್ವಾಲಿಫೈಯರ್ ಆಟಗಾರ ಹ್ಯೂಬರ್ಟ್ ಹರ್ಕಝ್ ಅವರು ಅಗ್ರ ಶ್ರೇಯಾಂಕದ ಜಪಾನ್‌ನ ಕಿ ನಿಶಿಕೋರಿ ಅವರನ್ನು 7-5, 5-7, 6-2 ಸೆಟ್‌ಗಳಿಂದ ಸೋಲಿಸಿ ದುಬೈ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಇಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 7ರಲ್ಲಿ 6 ಬ್ರೇಕ್ ಪಾಯಿಂಟ್‌ಗಳನ್ನು ಗಳಿಸಿದ ಹರ್ಕಝ್ ಸುಮಾರು 2 ತಾಸಿಗೂ ಅಧಿಕ ಕಾಲ ನಡೆದ ಪಂದ್ಯದಲ್ಲಿ ಎದುರಾಳಿಯನ್ನು ಬಗ್ಗುಬಡಿದರು. ವಿಶ್ವದ ನಂ.77 ಆಟಗಾರ ಹರ್ಕಝ್ ತಮ್ಮ ಮುಂದಿನ ಪಂದ್ಯದಲ್ಲಿ ಸಿಟ್ಸಿಪಾಸ್ ಅಥವಾ ಎಗೊರ್ ಗೆರಾಸಿಮೊವ್ ಅವರನ್ನು ಎದುರಿಸಲಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ವಿಶ್ವದ 113ನೇ ನಂ. ಆಟಗಾರ ಲಿಥುವೇನಿಯದ ರಿಕರ್ಡಸ್ ಬೆರಂಕಿಸ್ ಅವರು ಅಮೆರಿಕದ ಡೆನಿಸ್ ಕುಡ್ಲ ಅವರನ್ನು 6-4, 6-1ರಿಂದ ಮಣಿಸಿದರು.