×
Ad

ಯೂತ್ ಟೆಸ್ಟ್: ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

Update: 2019-02-28 23:53 IST

ತಿರುವನಂತಪುರ, ಫೆ.28: ಎಡಗೈ ವೇಗಿ ರೆಕ್ಸ್ ಸಿಂಗ್(18ಕ್ಕೆ 4) ಹಾಗೂ ಬಲಗೈ ವೇಗಿ ಅಂಶುಲ್ ಕಾಂಬೋಜ್(20ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ದ.ಆಫ್ರಿಕ ವಿರುದ್ಧ ಎರಡನೇ ಹಾಗೂ ಕೊನೆಯ ಅಂಡರ್-19 ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 158 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಸರಣಿಯನ್ನು 2-0ಯಿಂದ ವೈಟ್‌ವಾಶ್ ಮಾಡಿಕೊಂಡಿದೆ.

ಪ್ರಥಮ ಇನಿಂಗ್ಸ್‌ನಲ್ಲಿ ದ.ಆಫ್ರಿಕ 152 ರನ್ ಮಾಡಿದ್ದರೆ ಅದಕ್ಕುತ್ತರವಾಗಿ ಆತಿಥೇಯ ತಂಡ ಯಶಸ್ವಿ ಜೈಸ್ವಾಲ್(173) ಹಾಗೂ ವೈಭವ್ ಕಂದ್ಪಾಲ್(120) ಅವರ ಸೊಗಸಾದ ಶತಕಗಳ ಬಲದಿಂದ 395 ರನ್ ಗಳಿಸಿ ಆಲೌಟ್ ಆಗಿತ್ತು.

ಆ ಬಳಿಕ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 85 ರನ್‌ಗಳಿಗೆ ಸರ್ವಪತನ ಕಂಡ ಪ್ರವಾಸಿ ತಂಡ ಹೀನಾಯ ಸೋಲು ಅನುಭವಿಸಿತು. 50ಕ್ಕೆ 2 ವಿಕೆಟ್‌ಗಳಿಂದ ಇನಿಂಗ್ಸ್ ಮುಂದುವರಿಸಿದ ತಂಡ 25 ಓವರ್‌ಗಳಲ್ಲಿ ಕೇವಲ 35 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡಿತು.

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ತರಬೇತಿಯಲ್ಲಿ ಪಳಗುತ್ತಿರುವ ಭಾರತ ಅಂಡರ್-19 ತಂಡ ಪಂದ್ಯದ ಎಲ್ಲ ವಿಭಾಗಗಳಲ್ಲಿ ಪ್ರವಾಸಿಗರ ಎದುರು ಮೇಲುಗೈ ಸಾಧಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News