×
Ad

ಬುಕ್ಕಿ ಸಂಜೀವ್ ಚಾವ್ಲಾ ಗಡಿಪಾರು ಆದೇಶಕ್ಕೆ ಗೃಹ ಕಾರ್ಯದರ್ಶಿ ಸಹಿ

Update: 2019-03-02 22:25 IST

ಲಂಡನ್, ಮಾ. 2: ಶಂಕಿತ ಕ್ರಿಕೆಟ್ ಬುಕ್ಕಿ ಸಂಜೀವ್ ಚಾವ್ಲಾರನ್ನು ಭಾರತಕ್ಕೆ ಗಡಿಪಾರು ಮಾಡುವ ಆದೇಶಕ್ಕೆ ಬ್ರಿಟನ್ ಗೃಹ ಕಾರ್ಯದರ್ಶಿ ಸಾಜಿದ್ ಜಾವೇದ್ ಸಹಿ ಹಾಕಿದ್ದಾರೆ.

2000ದಲ್ಲಿ ದಕ್ಷಿಣ ಆಫ್ರಿಕದ ಭಾರತ ಪ್ರವಾಸದ ವೇಳೆ ಕ್ರಿಕೆಟ್ ಪಂದ್ಯಗಳ ಫಲಿತಾಂಶವನ್ನು ಮೊದಲೇ ನಿರ್ಧರಿಸಿದ ಆರೋಪದಲ್ಲಿ ವಿಚಾರಣೆ ಎದುರಿಸಲು ಸಂಜೀವ್ ಚಾವ್ಲಾ ಭಾರತದ ಅಧಿಕಾರಿಗಳಿಗೆ ಬೇಕಾಗಿದ್ದಾರೆ.

ಭಾರತದ ಬ್ಯಾಂಕ್ ‌ಗಳಿಗೆ 10,000 ಕೋಟಿ ರೂ. ಗೂ ಅಧಿಕ ಮೊತ್ತ ವಂಚಿಸಿ ಬ್ರಿಟನ್‌ ಗೆ ಪಲಾಯನಗೈದಿರುವ ವಿಜಯ್ ಮಲ್ಯರ ಗಡಿಪಾರಿಗೆ ಲಂಡನ್‌ನ ನ್ಯಾಯಾಲಯವೊಂದು ಹಸಿರು ನಿಶಾನೆ ತೋರಿಸಿದ ಒಂದು ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ತನ್ನ ಗಡಿಪಾರಿಗೆ ಅನುಮತಿ ನೀಡಿರುವ ವೆಸ್ಟ್‌ ಮಿನ್‌ ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಮಲ್ಯ ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

‘‘2019 ಫೆಬ್ರವರಿ 27ರಂದು, ಎಲ್ಲ ಸಂಬಂಧಪಟ್ಟ ವಿಷಯಗಳನ್ನು ಜಾಗರೂಕತೆಯಿಂದ ಪರಿಶೀಲಿಸಿದ ಬಳಿಕ, ಸಂಜೀವ್ ಚಾವ್ಲಾರನ್ನು ಭಾರತಕ್ಕೆ ಗಡಿಪಾರು ಮಾಡುವ ಆದೇಶಕ್ಕೆ ಗೃಹ ಕಾರ್ಯದರ್ಶಿ ಸಹಿ ಹಾಕಿದರು’’ ಎಂದು ಬ್ರಿಟನ್ ಗೃಹ ಕಚೇರಿ ವಕ್ತಾರರೊಬ್ಬರು ‘ಹಿಂದೂಸ್ತಾನ್ ಟೈಮ್ಸ್’ಗೆ ಶುಕ್ರವಾರ ತಿಳಿಸಿದರು.

ಗಡಿಪಾರು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಒಪ್ಪಿಗೆ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಚಾವ್ಲಾಗೆ 14 ದಿನಗಳ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News