×
Ad

ಜೆರುಸಲೇಮ್ ಕೌನ್ಸುಲೇಟ್ ಮುಚ್ಚಿದ ಅಮೆರಿಕ

Update: 2019-03-04 23:04 IST

ಜೆರುಸಲೇಮ್, ಮಾ. 4: ಜೆರುಸಲೇಮ್ ನಲ್ಲಿರುವ ತನ್ನ ಕೌನ್ಸುಲೇಟ್ ಕಚೇರಿಯನ್ನು ಅಮೆರಿಕ ಅಧಿಕೃತವಾಗಿ ಮುಚ್ಚಿದೆ ಹಾಗೂ ಅದನ್ನು ಟೆಲ್‌ಅವೀವ್‌ ನಲ್ಲಿರುವ ತನ್ನ ರಾಯಭಾರ ಕಚೇರಿಗೆ ವರ್ಗಾಯಿಸಿದೆ.

ಇದರೊಂದಿಗೆ ಫೆಲೆಸ್ತೀನಿಯರ ಪಾಲಿಗಿದ್ದ ಮಹತ್ವದ ರಾಜತಾಂತ್ರಿಕ ಕಚೇರಿಯೊಂದು ಮುಚ್ಚಿದಂತಾಗಿದೆ.

ಜೆರುಸಲೇಮ್ ರಾಜತಾಂತ್ರಿಕ ಕಚೇರಿಯು ದಶಕಗಳ ಕಾಲ ಫೆಲೆಸ್ತೀನಿಯರಿಗೆ ಅಮೆರಿಕದ ರಾಯಭಾರ ಕಚೇರಿಯಂತೆ ಕೆಲಸ ಮಾಡುತ್ತಿತ್ತು. ಈಗ ಈ ಕೆಲಸವನ್ನು ರಾಯಭಾರ ಕಚೇರಿಯ ಅಡಿಯಲ್ಲಿ ಫೆಲೆಸ್ತೀನ್ ವ್ಯವಹಾರಗಳ ಘಟಕ ನೋಡಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News