ಬ್ರಿಟನ್ ಕುಟುಂಬದ ಮನೆಯಲ್ಲಿ ಟಿಪ್ಪು ಸುಲ್ತಾನ್‌ಗೆ ಸೇರಿದ ಆಯುಧಗಳು ಪತ್ತೆ

Update: 2019-03-07 18:24 GMT
ಫೋಟೋ ಕೃಪೆ: metro.co.uk

ಲಂಡನ್,ಮಾ.7: ಇಂಗ್ಲೆಂಡ್‌ನ ಬರ್ಕ್‌ಶೈರ್ ಕೌಂಟಿಯಲ್ಲಿ ನೆಲೆಸಿರುವ ಕುಟುಂಬವೊಂದು ತನ್ನ ಮನೆಯ ಅಟ್ಟದ ಮೇಲೆ ಇಟ್ಟಿದ್ದ ಆಯುಧಗಳು ಮೈಸೂರನ್ನು ಒಂದು ಕಾಲದಲ್ಲಿ ಆಳಿದ ದೊರೆ ಟಿಪ್ಪು ಸುಲ್ತಾನನಿಗೆ ಸೇರಿದ್ದು ಎಂಬುದನ್ನು ತಿಳಿದು ಆಶ್ಚರ್ಯಚಕಿತಗೊಂಡಿದೆ ಎಂದು ಮೆಟ್ರೊ ಪತ್ರಿಕೆ ವರದಿ ಮಾಡಿದೆ.

ಈ ಕುಟುಂಬದ ಪೂರ್ವಜರು 18ನೇ ಶತಮಾನದಲ್ಲಿ ಬ್ರಿಟಿಶರ ಸೇನೆಯಲ್ಲಿ ಅಧಿಕಾರಿಯಾಗಿದ್ದು, ಅವರೇ ಟಿಪ್ಪು ಸುಲ್ತಾನನ ಅರಮನೆಯಿಂದ ಈ ಶಶ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಿದ್ದರು. ಸದ್ಯ ಈ ವಸ್ತುಗಳು ಹಲವು ಮಿಲಿಯನ್ ಪೌಂಡ್‌ಗಳಿಗೆ ಮಾರಾಟವಾಗಬಹುದು ಎಂದು ಪತ್ರಿಕೆ ವರದಿ ಮಾಡಿದೆ. ಸಂಗ್ರಹದಲ್ಲಿ ದೊರೆತ ಆಯುಧಗಳಲ್ಲಿ ಟಿಪ್ಪು ಸುಲ್ತಾನ್ 1799ರಲ್ಲಿ ಬ್ರಿಟಿಶರ ವಿರುದ್ಧ ತನ್ನ ಕೊನೆಯ ಯುದ್ಧದಲ್ಲಿ ಉಪಯೋಗಿಸಿದ್ದ ಗನ್ ಕೂಡಾ ಸೇರಿದೆ. ಈ ಗನ್‌ಗೆ ಹುಲಿಯ ಪಟ್ಟೆಯಂತ ವಿನ್ಯಾಸವಿದೆ ಎಂದು ವರದಿ ತಿಳಿಸಿದೆ.

ಗನ್ ಜೊತೆಗೆ ಈ ಸಂಗ್ರಹದಲ್ಲಿ, ಟಿಪ್ಪು ತಂದೆ ಹೈದರ್ ಅಲಿಗೆ ಸೇರಿದ ಚಿನ್ನದ ಹೊರಪದರ ಹೊಂದಿರುವ ಖಡ್ಗ ಹಾಗೂ ಬಂಗಾರದ ಬುತ್ತಿ ಇದೆ. ಈ ಬುತ್ತಿಯಲ್ಲಿ ಮೂರು ಕಡಲೆ ಕಾಳುಗಳು ಈಗಲೂ ಇವೆ ಎಂದು ಪತ್ರಿಕೆ ವರದಿ ಮಾಡಿದೆ.

    

ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಯಾಗಿದ್ದ ಮೇಜರ್ ಥಾಮಸ್ ಹರ್ಟ್ ನಾಲ್ಕನೇ ಆ್ಯಂಗ್ಲೊ-ಮೈಸೂರು ಯುದ್ಧದ ನಂತರ ಈ ಆಯುಧಗಳನ್ನು ಬ್ರಿಟನ್‌ಗೆ ಕೊಂಡೊಯ್ದಿದ್ದರು. ಅದು ಈಗ ಹರ್ಟ್‌ನ ವಂಶಸ್ಥರ ಸೊತ್ತಾಗಿದೆ ಎಂದು ಮೆಟ್ರೊ ಪತ್ರಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News