ಪಾಕಿಸ್ತಾನದ ‘ಸಂಯಮ’ಕ್ಕೆ ಚೀನಾ ಶ್ಲಾಘನೆ

Update: 2019-03-07 17:50 GMT

ಇಸ್ಲಾಮಾಬಾದ್, ಮಾ. 7: ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ಭವಿಸಿದ ಉದ್ವಿಗ್ನತೆಯನ್ನು ನಿಭಾಯಿಸಿದ ರೀತಿಗೆ ಹಾಗೂ ತೋರಿಸಿದ ‘ಸಂಯಮ’ಕ್ಕೆ ಚೀನಾವು ಪಾಕಿಸ್ತಾನವನ್ನು ಶ್ಲಾಘಿಸಿದೆ.

ಚೀನಾದ ಉಪ ವಿದೇಶ ಸಚಿವ ಕೊಂಗ್ ಕ್ಸುವಾನ್‌ಯೌ ಪಾಕಿಸ್ತಾನಕ್ಕೆ ಭೇಟಿ ನೀಡಿದ ಬಳಿಕ, ಚೀನಾದ ವಿದೇಶ ಸಚಿವಾಲಯ ಗುರುವಾರ ಈ ಹೇಳಿಕೆಯನ್ನು ನೀಡಿದೆ.

‘‘ಪಾಕಿಸ್ತಾನ ಮತ್ತು ಭಾರತಗಳ ನಡುವಿನ ಹಾಲಿ ಸ್ಥಿತಿಗತಿಗೆ ಚೀನಾ ನಿಕಟ ಗಮನ ನೀಡಿದೆ ಹಾಗೂ ಆರಂಭದಿಂದಲೂ ಶಾಂತವಾಗಿದ್ದುಕೊಂಡು ಸಂಯಮ ಪ್ರದರ್ಶಿಸಿದ ಹಾಗೂ ಮಾತುಕತೆಯ ಮೂಲಕ ಉದ್ವಿಗ್ನತೆ ಕಡಿಮೆ ಮಾಡಲು ಮುಂದಾದ ಪಾಕಿಸ್ತಾನವನ್ನು ಅದು ಶ್ಲಾಘಿಸುತ್ತದೆ’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News