ಉಗ್ರ ಗುಂಪುಗಳ ವಿರುದ್ಧದ ಕ್ರಮ ‘ಕಣ್ಣೊರೆಸುವ ತಂತ್ರ’: ಅಮೆರಿಕದ ವೆಬ್‌ಸೈಟ್

Update: 2019-03-07 17:52 GMT

ಇಸ್ಲಾಮಾಬಾದ್, ಮಾ. 7: ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಸರಕಾರ ನಡೆಸುತ್ತಿರುವ ದಮನ ಕಾರ್ಯಾಚರಣೆಯು ‘ಕಣ್ಣೊರೆಸುವ ತಂತ್ರ’ವಾಗಿದೆ ಎಂದು ಭಯೋತ್ಪಾದನೆ ವಿರುದ್ಧದ ಹೋರಾಟದ ಬಗ್ಗೆ ವರದಿ ಮಾಡುವ ಅಮೆರಿಕದ ಸುದ್ದಿ ವೆಬ್‌ಸೈಟೊಂದು ಹೇಳಿದೆ.

‘‘ಹಿಂದಿನ ಘಟನೆಗಳ ಆಧಾರದಲ್ಲಿ ಹೇಳುವುದಾದರೆ, ಪಾಕಿಸ್ತಾನಿ ನೆಲದಿಂದ ನಡೆಸಲಾಗುತ್ತಿರುವ ಭೀಕರ ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ಪಾಶ್ಚಾತ್ಯ ಸರಕಾರಗಳನ್ನು ಖುಷಿಪಡಿಸಲು ಪಾಕಿಸ್ತಾನ ನಡೆಸುತ್ತಿರುವ ಕಣ್ಣೊರೆಸುವ ತಂತ್ರ ಇದಾಗಿದೆ’’ ಎಂದು ‘ಲಾಂಗ್ ವಾರ್ ಜರ್ನಲ್’ ಹೇಳಿದೆ.

‘‘ಜಮಾಅತುದಅವಾ ಕಚೇರಿಗಳನ್ನು ಮುಚ್ಚಿದ್ದಾಗಿ ಹಾಗೂ ಅದರ ಉನ್ನತ ನಾಯಕರನ್ನು ಬಂಧಿಸಿದ್ದಾಗಿ ಪಾಕಿಸ್ತಾನ ಹಿಂದೆ ಕೂಡ ಹೇಳಿಕೊಂಡಿತ್ತು. ಆದರೆ, ತಿಂಗಳುಗಳ ಬಳಿಕ ಅದರ ಕಚೇರಿಗಳನ್ನು ತೆರೆಯಲಾಗಿತ್ತು ಹಾಗೂ ನಾಯಕರನ್ನು ಬಿಡುಗಡೆ ಮಾಡಲಾಗಿತ್ತು’’ ಎಂದು ವೆಬ್‌ಸೈಟ್ ಬುಧವಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News