×
Ad

ಹಫೀಝ್ ‌ನ ನಿಷೇಧ ತೆರವು ಮನವಿ ತಿರಸ್ಕರಿಸಿದ ವಿಶ್ವಸಂಸ್ಥೆ

Update: 2019-03-07 23:23 IST

ವಿಶ್ವಸಂಸ್ಥೆ, ಮಾ. 7: ಜಾಗತಿಕ ಭಯೋತ್ಪಾದಕರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆಯಬೇಕೆಂದು ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರ ಹಫೀಝ್ ಸಯೀದ್ ಮಾಡಿರುವ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿದೆ.

ಲಷ್ಕರೆ ತಯ್ಯಬ ಭಯೋತ್ಪಾದಕ ಗುಂಪಿನ ಮುಖ್ಯಸ್ಥನೂ ಆಗಿರುವ ಸಯೀದ್‌ನ ಚಟುವಟಿಕೆಗಳ ಕುರಿತ ‘ಅತ್ಯಂತ ಗೌಪ್ಯ ಮಾಹಿತಿ’ ಸೇರಿದಂತೆ ವಿವರವಾದ ಪುರಾವೆಯನ್ನು ಭಾರತ ಸಲ್ಲಿಸಿದ ಬಳಿಕ, ಅವನ ಮನವಿಯನ್ನು ತಿರಸ್ಕರಿಸುವ ನಿರ್ಧಾರವನ್ನು ವಿಶ್ವಸಂಸ್ಥೆ ತೆಗೆದುಕೊಂಡಿತು ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಮುಂಬೈ ಭಯೋತ್ಪಾದಕ ದಾಳಿಯ ಬಳಿಕ, 2008 ಡಿಸೆಂಬರ್ 10ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಹಫೀಝ್ ‌ಸಯೀದ್ ವಿರುದ್ಧ ನಿಷೇಧ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News