ನಾಲ್ಕನೇ ಏಕದಿನ: ಟಾಸ್ ಜಯಿಸಿದ ಭಾರತ ಬ್ಯಾಟಿಂಗ್
Update: 2019-03-10 13:43 IST
ಮೊಹಾಲಿ, ಮಾ. 10: ಪ್ರವಾಸಿ ಆಸ್ಟ್ರೇಲಿಯದ ವಿರುದ್ಧ 4ನೇ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಜಯಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1 ಗೆಲುವಿನೊಂದಿಗೆ ಮುನ್ನಡೆ ಸಾಧಿಸಿದೆ.
ಭಾರತ ತಂಡದಲ್ಲಿ 4 ಬದಲಾವಣೆ ಮಾಡಲಾಗಿದೆ. ಮಧ್ಯಮ ಸರದಿಯಲ್ಲಿ ಅಂಬಟಿ ರಾಯುಡು ಬದಲಿಗೆ ಲೋಕೇಶ್ ರಾಹುಲ್ ಸ್ಥಾನ ಪಡೆದಿದ್ದಾರೆ. ವಿಕೆಟ್ ಕೀಪರ್ ಎಂ.ಎಸ್ ಧೋನಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ವಿಕೆಟ್ ಕೀಪರ್ ರಿಷಭ್ ಪಂತ್ ವಿಕೆಟ್ ಕೀಪರ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರವೀಂದ್ರ ಜಡೇಜ ಬದಲಿಗೆ ಯಜುವೇಂದ್ರ ಚಹಾಲ್ ಸರಣಿಯಲ್ಲಿ ಮೊದಲ ಬಾರಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವೇಗಿ ಮುಹಮ್ಮದ್ ಶಮಿ ಅವರು ಭುವನೇಶ್ವರ್ ಕುಮಾರ್ ಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ.
ಆಶ್ಟ್ರೇಲಿಯ ತಂಡದಲ್ಲಿ ಏಕೈಕ ಬದಲಾವಣೆ ಮಾಡಲಾಗಿದ್ದು, ನಥಾನ್ ಲಿಯೋನ್ ಬದಲಿಗೆ ಜೇಸನ್ ಬೆಹರ್ನಡ್ರಾರ್ಫ್ ಸ್ಥಾನ ಪಡೆದಿದ್ದಾರೆ.