ನಾಲ್ಕನೇ ಏಕದಿನ: ಧವನ್ ಶತಕ, ರೋಹಿತ್ 95ರಲ್ಲಿ ಔಟ್
ಮೊಹಾಲಿ, ಮಾ.10: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ನಾಲ್ಕನೇ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಆರಂಭಿಕ ದಾಂಡಿಗ ಶಿಖರ್ ಧವನ್ 16ನೇ ಶತಕ ದಾಖಲಿಸಿದ್ದಾರೆ. ರೋಹಿತ್ ಶರ್ಮಾ 5 ರನ್ ನಿಂದ ಶತಕ ವಂಚಿತಗೊಂಡರು.
ಧವನ್ ತನ್ನ 127ನೇ ಏಕದಿನ ಪಂದ್ಯದಲ್ಲಿ 97 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 16ನೇ ಶತಕ ಪೂರ್ಣಗೊಳಿಸಿದರು. ಆದರೆ ರೋಹಿತ್ ಶರ್ಮ 92 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 95 ರನ್ ಗಳಿಸಿ ರಿಚರ್ಡ್ಸನ್ ಎಸೆತದಲ್ಲಿ ಹ್ಯಾಂಡ್ಸ್ ಕ್ಯಾಂಬ್ ಗೆ ಕ್ಯಾಚ್ ನೀಡುವ ಮೂಲಕ ತನ್ನ 205ನೇ ಪಂದ್ಯದಲ್ಲಿ 23ನೇ ಶತಕ ವಂಚಿತಗೊಂಡರು.
ಶಿಖರ್ ಧವನ್ 143 ರನ್ (15ಎ, 18ಬೌ,3ಸಿ) ಗಳಿಸಿ ಕಮಿನ್ಸ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಮೊದಲ ವಿಕೆಟ್ ಗೆ ರೋಹಿತ್ ಶರ್ಮಾ ಮತ್ತು ಧವನ್ 31 ಓವರ್ ಗಳಲ್ಲಿ 193 ರನ್ ಜೊತೆಯಾಟ ನೀಡಿದರು. ಬಳಿಕ ಧವನ್ ಮತ್ತು ಲೋಕೇಶ್ ರಾಹುಲ್ ಎರಡನೇ ವಿಕೆಟ್ ಗೆ 61 ರನ್ ಸೇರಿಸಿದರು. ನಾಯಕ ವಿರಾಟ್ ಕೊಹ್ಲಿ (7) ಬೇಗನೆ ಔಟಾದರು. ಭಾರತ 40 ಓವರ್ ಗಳ ಮುಕ್ತಾಯಕ್ಕೆ 3ವಿಕೆಟ್ ನಷ್ಟದಲ್ಲಿ 267 ರನ್ ಗಳಿಸಿದ್ದು, ರಾಹುಲ್ 18 ರನ್ ಮತ್ತು ರಿಷಭ್ ಪಂತ್ 1ರನ್ ಗಳಿಸಿ ಆಡುತ್ತಿದ್ದಾರೆ