ತೆರೇಸಾ ಮೇಯ ಬ್ರೆಕ್ಸಿಟ್ ಒಪ್ಪಂದಕ್ಕೆ 2ನೇ ಸೋಲು

Update: 2019-03-13 17:52 GMT

ಲಂಡನ್, ಮಾ. 13: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ (ಬ್ರೆಕ್ಸಿಟ್) ನಿಟ್ಟಿನಲ್ಲಿ ಪ್ರಧಾನಿ ತೆರೇಸಾ ಮೇ ರೂಪಿಸಿರುವ ಒಪ್ಪಂದವನ್ನು ಬ್ರಿಟನ್ ಸಂಸದರು ಮಂಗಳವಾರ ಎರಡನೇ ಬಾರಿಗೆ ತಿರಸ್ಕರಿಸಿದ್ದಾರೆ.

ಮಾರ್ಚ್ 29ಕ್ಕೆ ಮುನ್ನ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ವಿಧ್ಯುಕ್ತವಾಗಿ ಬೇರ್ಪಡಲಿದೆ. ಆದರೆ, ಅದು ಹೇಗೆ ಸಂಭವಿಸುತ್ತದೆ ಎಂಬ ಬಗ್ಗೆ ಹುಟ್ಟಿಕೊಂಡಿರುವ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಕರೆನ್ಸಿ ಪೌಂಡ್‌ನ ವೌಲ್ಯ ಮಂಗಳವಾರ ಕುಸಿದಿದೆ, ಉದ್ದಿಮೆಗಳು ನಿರಾಶೆ ವ್ಯಕ್ತಪಡಿಸಿವೆ.

ಸ್ಟ್ರಾಸ್‌ಬೋರ್ಗ್‌ನಲ್ಲಿ ಸೋಮವಾರ ಸಂಜೆ ಏರ್ಪಟ್ಟ ಪರಿಷ್ಕೃತ ಒಪ್ಪಂದವು ಹೌಸ್ ಆಫ್ ಕಾಮನ್ಸ್‌ನಲ್ಲಿ 391-242 ಮತಗಳ ಅಂತರದಿಂದ ತಿರಸ್ಕೃತಗೊಂಡಿದೆ.

ಮೊದಲ ಒಪ್ಪಂದವು ಜನವರಿಯಲ್ಲಿ ಸೋಲು ಕಂಡಿತ್ತು.

ಮುಂದುವರಿದಿರುವ ಅನಿಶ್ಚಿತತೆಯು, ಇನ್ನೊಂದು ಜನಮತಗಣನೆ ನಡೆಸುವುದು ಸೇರಿದಂತೆ ಹಲವಾರು ಸಾಧ್ಯತೆಗಳನ್ನು ತೆರೆದಿಟ್ಟಿದೆ.

ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಬೇಕೇ ಬೇಡವೇ ಎಂಬ ವಿಷಯದಲ್ಲಿ 2016ರ ಜೂನ್‌ನಲ್ಲಿ ಜನಮತಗಣನೆ ನಡೆದಿತ್ತು. ಅಂದು ಜನರು ಕಡಿಮೆ ಅಂತರದಲ್ಲಿ ‘ಬ್ರೆಕ್ಸಿಟ್’ ಪರ ತೀರ್ಪು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News