4ರಲ್ಲಿ 1 ಸಾವಿಗೆ ಪರಿಸರ ಮಾಲಿನ್ಯ ಕಾರಣ: ವಿಶ್ವಸಂಸ್ಥೆ

Update: 2019-03-13 18:00 GMT

ನೈರೋಬಿ, ಮಾ. 13: ಜಗತ್ತಿನಾದ್ಯಂತ ಸಂಭವಿಸುವ ಎಲ್ಲ ಅಕಾಲಿಕ ಸಾವುಗಳು ಮತ್ತು ರೋಗಗಳ ಕಾಲು ಭಾಗಕ್ಕೆ ಮಾನವನಿರ್ಮಿತ ಮಾಲಿನ್ಯ ಹಾಗೂ ಪರಿಸರ ಹಾನಿ ಕಾರಣ ಎಂದು ಭೂಮಿಯ ಅಪಾಯಕಾರಿ ಸ್ಥಿತಿಯ ಕುರಿತ ಮಹತ್ವದ ವರದಿಯೊಂದರಲ್ಲಿ ವಿಶ್ವಸಂಸ್ಥೆ ಹೇಳಿದೆ.

ವಾಹನಗಳು ಹಾಗೂ ಕೈಗಾರಿಕೆಗಳು ಬಿಡುವ ಅಪಾಯಕಾರಿ ಹೊಗೆ, ಕುಡಿಯುವ ನೀರನ್ನು ಕಲುಷಿತಗೊಳಿಸುವ ರಾಸಾಯನಿಕಗಳು ಹಾಗೂ ನೂರಾರು ಕೋಟಿ ಜನರ ಜೀವನೋಪಾಯಕ್ಕೆ ಮಹತ್ವದ್ದಾದ ಪರಿಸರ ವ್ಯವಸ್ಥೆಯ ನಾಶದಿಂದಾಗಿ ಜಾಗತಿಕವಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಹಾಗೂ ಇದು ಜಾಗತಿಕ ಆರ್ಥಿಕತೆಗೆ ಅಡ್ಡಿಯಾಗಿವೆ ಎಂದು ಬುಧವಾರ ಬಿಡುಗಡೆಗೊಂಡ ವರದಿ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News