ಜಂಟಿ ಆತಿಥ್ಯಕ್ಕೆ ದಕ್ಷಿಣ, ಉತ್ತರ ಕೊರಿಯಾ ಆಸಕ್ತಿ

Update: 2019-03-20 04:24 GMT

ಸಿಯೋಲ್, ಮಾ.19: ದಕ್ಷಿಣ ಹಾಗೂ ಉತ್ತರ ಕೊರಿಯಾದ ಫುಟ್ಬಾಲ್ ಸಂಸ್ಥೆಗಳು 2023ರ ಮಹಿಳಾ ವಿಶ್ವಕಪ್‌ನ್ನು ಜಂಟಿಯಾಗಿ ಆಯೋಜಿಸಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ಫಿಫಾ ಮಂಗಳವಾರ ತಿಳಿಸಿದೆ.

       ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ದಾಖಲೆಯ 9 ದೇಶಗಳಿಂದ ಅರ್ಜಿಗಳನ್ನು ಸ್ವೀಕರಿಸಿದ್ದು, ಅರ್ಜೆಂಟೀನ, ಆಸ್ಟ್ರೇಲಿಯ, ಬೊಲಿವಿಯಾ, ಬ್ರೆಝಿಲ್, ಕೊಲಂಬಿಯಾ, ಜಪಾನ್, ನ್ಯೂಝಿಲೆಂಡ್ ಹಾಗೂ ದಕ್ಷಿಣ ಆಫ್ರಿಕ ದೇಶಗಳು ಅರ್ಜಿ ಸಲ್ಲಿಸಿವೆ. ಪ್ರತಿ ದೇಶ ಎ.16ರೊಳಗೆ ಅರ್ಜಿ ಸಲ್ಲಿಸಬೇಕು. ಮುಂದಿನ ವರ್ಷದ ಮಾರ್ಚ್‌ನಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಫಿಫಾ ತಿಳಿಸಿದೆ.

ಎರಡೂ ದೇಶಗಳ ನಡುವೆ ಉದ್ಬ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ಹೋಗಲಾಡಿಸುವ ಪ್ರಯತ್ನದ ಭಾಗವಾಗಿ ಉತ್ತರ ಹಾಗೂ ದಕ್ಷಿಣ ಕೊರಿಯಾ ಕಳೆದ ವರ್ಷ ಪಿಯೊಂಗ್‌ಚಾಂಗ್‌ನಲ್ಲಿ ನಡೆದ ಚಳಿಗಾಲದ ಒಲಿಂಪಿಕ್ ಗೇಮ್ಸ್‌ನಲ್ಲಿ ಒಂದೇ ತಂಡವನ್ನು ಸ್ಪರ್ಧೆಗೆ ಇಳಿಸಿದ್ದವು. ಜಕಾರ್ತ ಹಾಗೂ ಪಾಲೆಂಬಾಂಗ್‌ನ ಜಂಟಿ ಆತಿಥ್ಯದಲ್ಲಿ ನಡೆದ ಏಶ್ಯನ್ ಗೇಮ್ಸ್ ನಲ್ಲಿ ಎರಡೂ ತಂಡಗಳು ಒಂದೇ ಧ್ವಜ ಹಿಡಿದು ಪಥ ಸಂಚಲನದಲ್ಲಿ ಭಾಗಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News