ಜಗತ್ತಿನ ಕಡಿಮೆ ಜೀವನ ವೆಚ್ಚದ ನಗರಗಳ ಪಟ್ಟಿಯಲ್ಲಿವೆ ಭಾರತದ ಈ 3 ನಗರಗಳು

Update: 2019-03-20 15:43 GMT

 ನ್ಯೂಯಾರ್ಕ್, ಮಾ.20: ಅತ್ಯಂತ ಕಡಿಮೆ ಜೀವನ ವೆಚ್ಚದ ನಗರಗಳ ಜಾಗತಿಕ ಪಟ್ಟಿಯಲ್ಲಿ ಭಾರತದ ದಿಲ್ಲಿ, ಚೆನ್ನೈ ಹಾಗೂ ಬೆಂಗಳೂರು ನಗರಗಳು ಸ್ಥಾನ ಪಡೆದಿವೆ ಎಂದು ‘ಇಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ಸ್’ನ 2019ರ ಜಾಗತಿಕ ಜೀವನ ವೆಚ್ಚ ಸಮೀಕ್ಷೆಯ ವರದಿ ತಿಳಿಸಿದೆ.

    ಪ್ಯಾರಿಸ್, ಸಿಂಗಾಪುರ ಹಾಗೂ ಹಾಂಗ್‌ಕಾಂಗ್ ಅತ್ಯಂತ ದುಬಾರಿ ಜೀವನವೆಚ್ಚದ ನಗರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿ ಜಂಟಿಯಾಗಿ ಕಾಣಿಸಿಕೊಂಡಿವೆ. ಸ್ವಿಟ್ಸರ್‌ಲ್ಯಾಂಡಿನ ಝೂರಿಚ್ ನಾಲ್ಕನೇ , ಜಪಾನ್‌ನ ಒಸಾಕಾ ಮತ್ತು ಸ್ವಿಟ್ಸರ್‌ಲ್ಯಾಂಡಿನ ಜಿನೇವಾ ಐದನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕೊರಿಯಾದ ಸಿಯೋಲ್, ಡೆನ್ಮಾರ್ಕ್‌ನ ಕಾಪೆನ್‌ ಹೇಗನ್, ಅಮೆರಿಕದ ನ್ಯೂಯಾರ್ಕ್ ಜಂಟಿಯಾಗಿ ಏಳನೇ ಸ್ಥಾನದಲ್ಲಿವೆ.

 ವಿಶ್ವದ ಅತ್ಯಂತ ಕಡಿಮೆ ಜೀವನ ವೆಚ್ಚದ ನಗರಗಳ ಪಟ್ಟಿಯಲ್ಲಿ ವೆನೆಝುವೆಲಾದ ಕ್ಯಾರಕಸ್ ಪ್ರಥಮ, ಸಿರಿಯಾದ ಡಮಾಸ್ಕಸ್ ದ್ವಿತೀಯ, ಉಜ್ಬೇಕಿಸ್ತಾನದ ತಾಷ್ಕೆಂಟ್, ಕಝಕ್‌ಸ್ತಾನದ ಅಲ್ಮಾಟಿ, ಪಾಕಿಸ್ತಾನದ ಕರಾಚಿ, ನೈಜೀರಿಯಾದ ಲಾಗೋಸ್, ಅರ್ಜೆಂಟೀನಾದ ಬ್ಯೂನಸ್ ಐರಿಸ್ ಹಾಗೂ ಆ ಬಳಿಕ ಕ್ರಮವಾಗಿ ದಿಲ್ಲಿ, ಚೆನ್ನೈ ಮತ್ತು ಬೆಂಗಳೂರು ನಗರಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News