ಚೀನಾದೊಂದಿಗಿನ ಹೆಚ್ಚುತ್ತಿರುವ ವ್ಯಾಪಾರ ಕೊರತೆಗೆ ಭಾರತ ಕಳವಳ

Update: 2019-03-20 17:23 GMT

ಬೀಜಿಂಗ್, ಮಾ. 20: ಚೀನಾದೊಂದಿಗಿನ ಹೆಚ್ಚುತ್ತಿರುವ ವ್ಯಾಪಾರ ಕೊರತೆಯ ಬಗ್ಗೆ ಭಾರತ ಬುಧವಾರ ಕಳವಳ ವ್ಯಕ್ತಪಡಿಸಿದೆ. ಭಾರತ-ಚೀನಾ ವ್ಯಾಪಾರ ಕೊರತೆಯು 58 ಬಿಲಿಯ ಡಾಲರ್ (ಸುಮಾರು 4 ಲಕ್ಷ ಕೋಟಿ ರೂಪಾಯಿ)ಗೆ ಏರಿದೆ.

ಹೆಚ್ಚುತ್ತಿರುವ ಭಾರತ-ಚೀನಾ ವ್ಯಾಪಾರ ಕೊರತೆಯನ್ನು ನಿಭಾಯಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂಬುದಾಗಿ ಚೀನಾಕ್ಕೆ ಭಾರತದ ನೂತನ ರಾಯಭಾರಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.

ಭಾರತೀಯ ಕೃಷಿ ಉತ್ಪನ್ನಗಳಿಗೆ ಚೀನಾ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಲಭಿಸುವ ನಿಟ್ಟಿನಲ್ಲಿ ಭಾರತವು ಚೀನಾದೊಂದಿಗೆ ವ್ಯವಹರಿಸುತ್ತಿದೆ ಎಂದು ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.

ಭಾರತ ಮತ್ತು ಚೀನಾಗಳು ತಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾಗ, ಜನವರಿ 8ರಂದು ವಿಕ್ರಮ್ ಮಿಸ್ರಿ ಚೀನಾದಲ್ಲಿ ಭಾರತೀಯ ರಾಯಭಾರಿಯಾಗಿ ಅಕಾರ ವಹಿಸಿರುವುದನ್ನು ಸ್ಮರಿಸಬಹುದಾಗಿದೆ.

ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ವ್ಯಾಪಾರ ಕೊರತೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

80 ಬಿಲಿಯ ಡಾಲರ್ (ಸುಮಾರು 5.50 ಲಕ್ಷ ಕೋಟಿ ರೂಪಾಯಿ) ವ್ಯಾಪಾರದಲ್ಲಿನ ವ್ಯಾಪಾರ ಕೊರತೆ ಈಗ 58 ಬಿಲಿಯ ಡಾಲರ್ (ಸುಮಾರು 4 ಲಕ್ಷ ಕೋಟಿ ರೂಪಾಯಿ) ದಾಟಿದೆ.

ದ್ವಿಪಕ್ಷೀಯ ವ್ಯಾಪಾರವು ಈ ವರ್ಷ 100 ಬಿಲಿಯ ಡಾಲರ್ (ಸುಮಾರು 6.88 ಲಕ್ಷ ಕೋಟಿ ರೂಪಾಯಿ) ದಾಟಲಿದೆ ಎಂದು ವಿಕ್ರಮ್ ತಿಳಿಸಿದರು.

‘‘ಆದರೆ, ಈ ಮೊತ್ತದಲ್ಲಿ ಭಾರತದ 58 ಬಿಲಿಯ ಡಾಲರ್ ವ್ಯಾಪಾರ ಕೊರತೆಯಿದೆ ಹಾಗೂ ಈ ಕೊರತೆಯು ಹಲವು ವರ್ಷಗಳಿಂದ ಹೆಚ್ಚುತ್ತಿದೆ. ಈ ವ್ಯಾಪಾರ ಕೊರತೆ ಸಮಸ್ಯೆಯನ್ನು ನಿವಾರಿಸುವುದು ನನ್ನ ಆದ್ಯತೆಗಳಲ್ಲಿ ಒಂದು. ಯಾಕೆಂದರೆ, ದೀರ್ಘಾವಯಲ್ಲಿ ನಾವು ಈ ಕೊರತೆಯನ್ನು ತಾಳಿಕೊಳ್ಳುವಂತಿಲ್ಲ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News