ಬ್ರಿಟನ್: ಭಾರತೀಯ ಆಧುನಿಕ ಗುಲಾಮರ ಸಂಖ್ಯೆಯಲ್ಲಿ ಹೆಚ್ಚಳ

Update: 2019-03-20 17:26 GMT

ಲಂಡನ್, ಮಾ. 20: ಬ್ರಿಟನ್‌ನಲ್ಲಿ ಮಾನವ ಸಾಗಾಣಿಕೆ ಮತ್ತು ಆಧುನಿಕ ಗುಲಾಮಗಿರಿಯ ಸಂಭಾವ್ಯ ಸಂತ್ರಸ್ತರು ಎನ್ನಲಾದ ಭಾರತೀಯರ ಸಂಖ್ಯೆ ಪ್ರತಿ ವರ್ಷ ಏರಿಕೆಯಾಗುತ್ತಿದೆ ಎಂಬುದಾಗಿ ನೂತನ ಅಂಕಿಅಂಶಗಳು ಬುಧವಾರ ತೋರಿಸಿವೆ.

ಈ ಸಂಖ್ಯೆಯು 2016ರಲ್ಲಿ 100 ಇದ್ದದ್ದು, 2017ರಲ್ಲಿ 140ಕ್ಕೇರಿತು ಹಾಗೂ 2018ರಲ್ಲಿ 196 ಆಯಿತು. ಈ ಪಟ್ಟಿಯಲ್ಲಿರುವ ಅಗ್ರ 10 ದೇಶಗಳ ಪೈಕಿ ಭಾರತವೂ ಒಂದಾಗಿದೆ.

ಪಟ್ಟಿಯಲ್ಲಿ ಬ್ರಿಟನ್ ಅಗ್ರಸ್ಥಾನದಲ್ಲಿದ್ದು, ಭಾರತ ಒಂಬತ್ತನೇ ಸ್ಥಾನದಲ್ಲಿದೆ. ಭಾರತೀಯ ನಾಗರಿಕರಿಗೆ ಸಂಬಂಸಿದ 2018ರ ಅಂಕಿಸಂಖ್ಯೆಗಳ ಪ್ರಕಾರ, 141 ಮಂದಿ ಕಾರ್ಮಿಕ ಶೋಷಣೆಗೆ ಒಳಗಾದರೆ, 31 ಮಂದಿ ಮನೆಗೆಲಸಗಾರರು ಯಜಮಾನರಿಂದ ಶೋಷಣೆಗೆ ಗುರಿಯಾಗಿದ್ದಾರೆ. 18 ಮಂದಿ ಲೈಂಗಿಕ ಶೋಷಣೆಗೆ ಒಳಗಾದರೆ, ಆರು ಮಂದಿ ‘ಅಜ್ಞಾತ ಶೋಷಣೆ’ಗೆ ಗುರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News