ಇರಾನ್ ವಿಮಾನಕ್ಕೆ ಬೆಂಕಿ: ಎಲ್ಲ 100 ಪ್ರಯಾಣಿಕರು ಪಾರು

Update: 2019-03-20 17:27 GMT

ಟೆಹರಾನ್, ಮಾ. 20: ಇರಾನ್ ರಾಜಧಾನಿ ಟೆಹರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಇಳಿದ ವಿಮಾನವೊಂದಕ್ಕೆ ಬೆಂಕಿ ಹತ್ತಿಕೊಂಡಿತು. ಆದಾಗ್ಯೂ, ಎಲ್ಲ 100 ಮಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ತೆರವುಗೊಳಿಸಲಾಯಿತು ಎಂದು ಇರಾನ್‌ನ ತುರ್ತು ಸ್ಥಿತಿ ಇಲಾಖೆಯ ಮುಖ್ಯಸ್ಥ ಪೀರ್ ಹುಸೈನ್ ಕೊಲಿವಂಡ್ ಸರಕಾರ ಟೆಲಿವಿಶನ್‌ನಲ್ಲಿ ಹೇಳಿದರು.

ವಿಮಾನದ ಲ್ಯಾಂಡಿಂಗ್ ಗಿಯರ್ ಸರಿಯಾಗಿ ತೆರೆಯದ ಕಾರಣದಿಂದಾಗಿ ಬೆಂಕಿ ಹೊತ್ತಿಕೊಂಡಿತು ಹಾಗೂ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಅವರು ತಿಳಿಸಿದರು.

ವಿಮಾನದ ಹಿಂದಿನ ಚಕ್ರಗಳನ್ನು ತೆರೆಯಲು ಪೈಲಟ್‌ಗೆ ಸಾಧ್ಯವಾಗಲಿಲ್ಲ. ಹಾಗಾಗಿ, ಎಲ್ಲ ಚಕ್ರಗಳನ್ನು ತೆರೆಯಲು ಪ್ರಯತ್ನಿಸುತ್ತಾ ವಿಮಾನವನ್ನು ವಿಮಾನ ನಿಲ್ದಾಣ ಸುತ್ತ ತಿರುಗಿಸಿದರು. ಅಂತಿಮವಾಗಿ ವಿಮಾನವನ್ನು ಚಕ್ರಗಳಿಲ್ಲದೆಯೇ ಇಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News