ಭಾರತವನ್ನು ಜಿಎಸ್‌ಪಿಯಿಂದ ಹೊರಗಿಡುವ ನಿರ್ಧಾರ ಮುಂದೂಡಲು ಟ್ರಂಪ್‌ಗೆ ಒತ್ತಾಯ

Update: 2019-03-28 17:09 GMT

ವಾಶಿಂಗ್ಟನ್, ಮಾ. 28: ಭಾರತಕ್ಕೆ ನೀಡಲಾಗಿರುವ ‘ಆದ್ಯತಾ ವ್ಯಾಪಾರ ಸ್ಥಾನಮಾನ’ವನ್ನು ರದ್ದುಪಡಿಸುವ ನಿರ್ಧಾರವನ್ನು ಭಾರತದಲ್ಲಿ ಚುನಾವಣೆ ಮುಗಿಯುವವರೆಗೆ ಮುಂದೂಡಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಅಮೆರಿಕದ ಹಲವಾರು ಪ್ರಭಾವಿ ಸಂಸದರು ಒತ್ತಾಯಿಸಿದ್ದಾರೆ.

ಜನರಲೈಝ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸಸ್ (ಜಿಎಸ್‌ಪಿ)ನ ಫಲಾನುಭವಿ ಅಭಿವೃದ್ಧಿಶೀಲ ದೇಶಗಳ ಪಟ್ಟಿಯಿಂದ ಭಾರತವನ್ನು ಕೈಬಿಡುವ ನಿರ್ಧಾರವನ್ನು ಟ್ರಂಪ್ ಈ ತಿಂಗಳ ಮೊದಲಲ್ಲಿ ಅಮೆರಿಕ ಸಂಸತ್ತಿನಲ್ಲಿ ಘೋಷಿಸಿದ್ದರು.

ಜಿಎಸ್‌ಪಿ ಅಡಿಯಲ್ಲಿ, ಅಭಿವೃದ್ಧಿಶೀಲ ದೇಶಗಳ ಆರ್ಥಿಕತೆಗಳು ಬೆಳೆಯುವುದಕ್ಕೆ ನೆರವಾಗಲು ಆ ದೇಶಗಳಿಂದ ಕೆಲವೊಂದು ಉತ್ಪನ್ನಗಳನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲಾಗುತ್ತದೆ.

‘‘ನಾವು ಜೊತೆಯಾಗಿ ಹೇಗೆ ಮುಂದುವರಿಯಬೇಕು ಎಂಬ ಬಗ್ಗೆ ರಾಜಕೀಯೇತರ ಚರ್ಚೆ ನಡೆಸಲು ಸಾಧ್ಯವಾಗುವಂತೆ, ಭಾರತವನ್ನು ಜಿಎಸ್‌ಪಿ ಫಲಾನುಭವಿಗಳ ಪಟ್ಟಿಯಿಂದ ಕೈಬಿಡುವ ನಿರ್ಧಾರವನ್ನು ಆ ದೇಶದಲ್ಲಿ ಚುನಾವಣೆಗಳು ಮುಗಿಯುವವರೆಗೆ ಮುಂದೂಡಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ’’ ಎಂದು ಅಮೆರಿಕದ ಮೊದಲ ಹಿಂದೂ ಸಂಸದೆ ತುಳಸಿ ಗ್ಯಾಬರ್ಡ್ ಸಮ್ಮೇಳನವೊಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News