ಭಾರತದ ಜೊತೆಗಿನ ಸೇನಾ ಭಾಗೀದಾರಿಕೆಗೆ ಐತಿಹಾಸಿಕ ವೇಗ: ಅಮೆರಿಕ

Update: 2019-03-28 17:11 GMT

ವಾಶಿಂಗ್ಟನ್, ಮಾ. 28: ಭಾರತದೊಂದಿಗಿನ ಸೇನಾ ಭಾಗೀದಾರಿಕೆಯು ‘ಐತಿಹಾಸಿಕ ವೇಗ’ದೊಂದಿಗೆ ಮುಂದುವರಿಯುತ್ತಿದೆ ಹಾಗೂ ಉಭಯ ದೇಶಗಳ ಸೇನೆಗಳು ಮಾಹಿತಿ ಹಂಚಿಕೆ ಸಾಮರ್ಥ್ಯಗಳನ್ನು ವೃದ್ಧಿಸಲು ಜೊತೆಯಾಗಿ ಕೆಲಸ ಮಾಡುತ್ತಿವೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ನಾಯಕರು ಹೇಳಿದ್ದಾರೆ.

‘‘ರಾಜಕೀಯ, ಆರ್ಥಿಕ ಮತ್ತು ಭದ್ರತೆ ಮುಂತಾದ ಹಲವಾರು ವಿಷಯಗಳಲ್ಲಿ ಅಮೆರಿಕ ಮತ್ತು ಭಾರತಗಳು ಸಹಜ ಭಾಗೀದಾರರು’’ ಎಂದು ಇಂಡೋ-ಪೆಸಿಫಿಕ್ ಕಮಾಂಡ್‌ನ ಕಮಾಂಡರ್ ಅಡ್ಮಿರಲ್ ಫಿಲಿಪ್ ಎಸ್. ಡೇವಿಡ್ಸನ್ ಎಂದು ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News