ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಪ್ರಾಥಮಿಕ ಮಟ್ಟದಲ್ಲಿ: ಚೀನಾ ಮಾಧ್ಯಮ

Update: 2019-03-30 17:57 GMT

ಬೀಜಿಂಗ್, ಮಾ. 30: ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನವು ಒಂದು ದಶಕದ ಹಿಂದೆ ಚೀನಾ ಹೊಂದಿದ್ದ ಮಟ್ಟದಲ್ಲಿದೆ ಎಂದು ಚೀನಾದ ಸರಕಾರಿ ಮಾಧ್ಯಮಗಳು ಮತ್ತು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಹಾಗಾಗಿ, ತನ್ನ ನೂತನ ಸಾಮರ್ಥ್ಯವು ಚೀನಾದ ಬಾಹ್ಯಾಕಾಶ ಶಕ್ತಿಗೆ ಪರ್ಯಾಯವಾಗಿದೆ ಹಾಗೂ ಪಾಕಿಸ್ತಾನವನ್ನು ಬೆದರಿಸಬಹುದಾಗಿದೆ ಎಂಬುದಾಗಿ ಭಾರತ ಭಾವಿಸುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕಾಗಿದೆ ಎಂದು ಅವರು ಹೇಳುತ್ತಾರೆ.

ಇತ್ತೀಚೆಗೆ ಭಾರತ ನಡೆಸಿರುವ ಯಶಸ್ವಿ ಉಪಗ್ರಹ-ನಿಗ್ರಹ ಕ್ಷಿಪಣಿ ಪರೀಕ್ಷೆಯ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

‘‘ಭಾರತ ಸೇನಾ ಪ್ರಗತಿಯನ್ನು ಸಾಧಿಸುತ್ತಿರುವವರೆಗೆ ಚೀನಾ ಮತ್ತು ಪಾಕಿಸ್ತಾನಗಳು ಹೆದರುತ್ತವೆ ಎಂಬುದಾಗಿ ಭಾರತೀಯರು ತಿಳಿದುಕೊಂಡಿದ್ದಾರೆ. ನೂತನ ಸಾಮರ್ಥ್ಯವನ್ನು ಈ ಎರಡು ದೇಶಗಳೊಂದಿಗಿನ ಭಾರತೀಯ ಸಂಬಂಧದಲ್ಲಿ ತಕ್ಷಣ ಬಳಸಬೇಕು ಎಂಬುದಾಗಿ ಅವರು ಬಯಸುತ್ತಾರೆ. ಇಂಥ ಅಭಿಪ್ರಾಯ ಅಮಾಯಕತನದಿಂದ ಕೂಡಿದೆ ಹಾಗೂ ಅಪಾಯಕಾರಿಯಾಗಿದೆ. ಸೇನೆ ಮತ್ತು ಒಟ್ಟಾರೆ ಸಾಮಥ್ಯದಲ್ಲಿ ಸುದೀರ್ಘ ಅವಧಿಯವರೆಗೆ ಭಾರತವು ಹಿಂದೆ ಬೀಳುತ್ತದೆ ಎಂಬುದನ್ನು ಅದು ಅರ್ಥಮಾಡಿಕೊಳ್ಳಬೇಕು’’ ಎಂದು ‘ಗ್ಲೋಬಲ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಸಂಪಾದಕೀಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News