ಐಪಿಎಲ್‌ನಿಂದ ಹೊರಗುಳಿದ ಡೇವಿಡ್ ವಿಲ್ಲಿ
Update: 2019-03-31 00:48 IST
ಚೆನ್ನೈ, ಮಾ.30: ವೈಯಕ್ತಿಕ ಕಾರಣ ಮುಂದಿಟ್ಟುಕೊಂಡು ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಡೇವಿಡ್ ವಿಲ್ಲಿ ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಇಂಗ್ಲೆಂಡ್‌ನ ಕ್ರಿಕೆಟಿಗ ವಿಲ್ಲಿ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮೂರು ಪಂದ್ಯಗಳನ್ನು ಆಡಿದ್ದರು. ವಿಲ್ಲಿ ಕಳೆದ ವರ್ಷ ಗಾಯಗೊಂಡಿದ್ದ ಕೇದಾರ್ ಜಾಧವ್ ಬದಲಿಗೆ ಸಿಎಸ್‌ಕೆ ತಂಡಕ್ಕೆ ಟೂರ್ನಿಯ ಕೊನೆಯ ಹಂತದಲ್ಲಿ ಸೇರ್ಪಡೆಯಾಗಿದ್ದರು. ಈ ವರ್ಷ ಅವರನ್ನು ಹಾಲಿ ಚಾಂಪಿಯನ್ ಚೆನ್ನೈ ತಂಡ ತನ್ನಲ್ಲೇ ಉಳಿಸಿಕೊಂಡಿತ್ತು.