×
Ad

ಐಪಿಎಲ್ :ಬೈರ್ ಸ್ಟೋವ್, ವಾರ್ನರ್ ಶತಕ; ಹೈದರಾಬಾದ್ 231/2

Update: 2019-03-31 17:54 IST

ಹೈದರಾಬಾದ್, ಮಾ.31: ಐಪಿಎಲ್ ಟ್ವೆಂಟಿ-20 ಟೂರ್ನಿಯ 11ನೇ ಪಂದ್ಯದಲ್ಲಿ  ಆರಂಭಿಕ ದಾಂಡಿಗರಾದ ಜೋನಿ ಬೈರ್ ಸ್ಟೋವ್ ಮತ್ತು ಡೇವಿಡ್ ವಾರ್ನರ್ ದಾಖಲಿಸಿದ ಆಕರ್ಷಕ ಶತಕಗಳ   ನೆರವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಎದುರಾಳಿ ರಾಯಲ್ ಚಾಲೆಂಜರ್ಸ್  ಬೆಂಗಳೂರು ತಂಡದ ಗೆಲುವಿಗೆ ಕಠಿಣ ಸವಾಲು ವಿಧಿಸಿದೆ.

ರಾಜೀವ್ ಗಾಂಧಿ ಇಂಟರ್ ನ್ಯಾಶನಲ್ ಸ್ಟೇಡಿಯಂನಲ್ಲಿ  ಇಂದು ಹೈದರಾಬಾದ್ ತಂಡ ನಿಗದಿತ 20  ಓವರ್ ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 231 ರನ್ ಗಳಿಸಿದೆ.

ಬೈರ್ ಸ್ಟೋವ್ 114 ರನ್ (56ಎ, 12ಬೌ,7ಸಿ) ಗಳಿಸಿ ಔಟಾದರು. ವಾರ್ನರ್ 100 ರನ್ (55ಎ, 5ಬೌ,5ಸಿ) ಗಳಿಸಿ ಔಟಾಗದೆ ಉಳಿದರು. ಇವರು ಮೊದಲ ವಿಕೆಟ್ ಗೆ 16.2 ಓವರ್ ಗಳಲ್ಲಿ 185 ರನ್ ಗಳಿಸಿದರು. ಆರಂಭಿಕ ದಾಂಡಿಗರು ಶತಕ ದಾಖಲಿಸಿರುವುದು ಐಪಿಎಲ್ ನಲ್ಲಿ ಹೊಸ ದಾಖಲೆಯಾಗಿದೆ.

 ವಾರ್ನರ್  ಈ ವರ್ಷ  ಐಪಿಎಲ್ ನಲ್ಲಿ  ತಾನಾಡಿದ 3ನೇ ಪಂದ್ಯದಲ್ಲಿ ಮೊದಲ ಶತಕ ದಾಖಲಿಸಿದ್ದಾರೆ.  3ನೇ ಪಂದ್ಯದಲ್ಲಿ ಮೊದಲ ಶತಕ ದಾಖಲಿಸಿದ್ದಾರೆ.  ಈ ವರ್ಷ ಸತತ ಮೂರನೇ ಬಾರಿ ಅವರು 50ಕ್ಕಿಂತ ಅಧಿಕ ರನ್ ಗಳಿಸಿದ್ದಾರೆ. ಅವರು ಕೆಕೆಆರ್ ವಿರುದ್ಧ  85 ರನ್ ಮತ್ತು ರಾಯಲ್ಸ್ ವಿರುದ್ಧ 69 ರನ್ ಗಳಿಸಿದ್ದರು.  ಈ ಮೊದಲು 2017, 2012 ಮತ್ತು 2010ರ ಐಪಿಎಲ್ ಟೂರ್ನಿಗಳಲ್ಲಿ ತಲಾ 1 ಶತಕ ಗಳಿಸಿದ್ದರು.

ವಾರ್ನರ್ 54 ಎಸೆತಗಳಲ್ಲಿ 5ಬೌಂಡರಿ ಮತ್ತು 5 ಸಿಕ್ಸರ್  ನೆರವಿನಲ್ಲಿ ಶತಕ ದಾಖಲಿಸುವ ಮೂಲಕ ಐಪಿಎಲ್ ನಲ್ಲಿ 4ನೇ ಶತಕ ಗಳಿಸಿದರು. ವಿರಾಟ್ ಕೊಹ್ಲಿ ಮತ್ತು  ಶೇನ್ ವಾಟ್ಸನ್ ಅವರ ಹೆಸರಲ್ಲಿರುವ 4  ಶತಕಗಳ  ದಾಖಲೆಯನ್ನು ಸರಿಗಟ್ಟಿದರು. ಬೈರ್ ಸ್ಟೋವ್ 52 ಎಸೆತಗಳಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಲ್ಲಿ ಐಪಿಎಲ್ ನಲ್ಲಿ ಚೊಚ್ಚಲ ಶತಕ ಪೂರೈಸಿದರು.ಬೈರ್ ಸ್ಟೋವ್  ಐಪಿಎಲ್ ನಲ್ಲಿ  ಶತಕ ದಾಖಲಿಸಿದ ಇಂಗ್ಲೆಂಡ್ ನ ಮೂರನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ಈ ಮೊದಲು ಬೆನ್ ಸ್ಟೋಕ್ಸ್ ಮತ್ತು ಕೆವಿನ್ ಪೀಟರ್ಸನ್  ಶತಕ ಸಿಡಿಸಿದ್ದರು. 

ವಿಜಯ್ ಶಂಕರ್ 9ರನ್ ಗಳಿಸಿ ಔಟಾದರು. ಯೂಸುಫ್ ಪಠಾಣ್ ಔಟಾಗದೆ 6 ರನ್ ಗಳಿಸಿದರು.ಟಾಸ್ ಜಯಿಸಿದ  ಆರ್ ಸಿಬಿ ತಂಡ ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News