ರಾಜಸ್ಥಾನಕ್ಕೆ 176 ರನ್ ಜಯದ ಗುರಿ
ಚೆನ್ನೈ, ಮಾ.31: ನಾಯಕ ಮಹೇಂದ್ರಸಿಂಗ್ ಧೋನಿ ಅವರ ಅಜೇಯ ಅರ್ಧಶತಕದ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ನ 12ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 176 ರನ್‌ಗಳ ಗೆಲುವಿನ ಗುರಿ ನೀಡಿದೆ.
ಇಲ್ಲಿಯ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ರವಿವಾರ ಟಾಸ್ ಗೆದ್ದ ರಾಜಸ್ಥಾನ ತಂಡ ಚೆನ್ನೈಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಧೋನಿ ಪಡೆಯ ಪರ ಬ್ಯಾಟಿಂಗ್ ಆರಂಭಿಸಿದ ಅಂಬಾಟಿ ರಾಯುಡು (1) ಹಾಗೂ ಶೇನ್ ವ್ಯಾಟ್ಸನ್ (13) ಉತ್ತಮ ಆರಂಭ ನೀಡಲಿಲ್ಲ. ಆ ಬಳಿಕ ಸುರೇಶ್ ರೈನಾ(36) ಒಂದಷ್ಟು ಹೊತ್ತು ರಾಜಸ್ಥಾನ ಬೌಲರ್‌ಗಳಿಗೆ ಸವಾಲಾದರು. ಕೇದಾರ್ ಜಾಧವ್‌ಗೆ (8) ವೈಫಲ್ಯ ಕಾದಿತ್ತು. ಧೋನಿ (ಅಜೇಯ 75, 46 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ಡ್ವೇನ್ ಬ್ರಾವೊ(27, 16 ಎಸೆತ, 3 ಬೌಂಡರಿ, 1 ಸಿಕ್ಸರ್) ಕಡಿಮೆ ಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದರು. ರವೀಂದ್ರ ಜಡೇಜ ಅಜೇಯ 8 ರನ್ ಗಳಿಸಿದರು. ಅಂತಿಮವಾಗಿ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ರಾಜಸ್ಥಾನ ಪರ ಜ್ರೋಅರ್ಚರ್(17ಕ್ಕೆ 2) ಉತ್ತಮಬೌಲಿಂಗ್‌ಪ್ರದರ್ಶನನೀಡಿದರು.