×
Ad

ಲಂಕಾ ಟೆಸ್ಟ್ ತಂಡದ ನಾಯಕ ಕರುಣರತ್ನೆ ಬಂಧನ, ಬಿಡುಗಡೆ

Update: 2019-03-31 23:50 IST

ಕೊಲಂಬೊ, ಮಾ.31: ಮದ್ಯ ಸೇವಿಸಿ ವಾಹನ ಚಲಾಯಿಸಿದ ಆರೋಪದ ಮೇಲೆ ಶ್ರೀಲಂಕಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ದಿಮುತ್ ಕರುಣರತ್ನೆಯನ್ನು ಕೊಲಂಬೊದಲ್ಲಿ ರವಿವಾರ ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

‘‘ತ್ರಿಚಕ್ರ ವಾಹನ ಚಾಲಕನೋರ್ವ ಅಪಘಾತಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದು ಈ ಅಪಘಾತದಲ್ಲಿ ಕರುಣರತ್ನೆ ಭಾಗಿಯಾಗಿದ್ದಾರೆಂದು ಇಎಸ್‌ಪಿಎನ್ ಕ್ರಿಕ್‌ಇನ್ಫೊ ವರದಿ ಮಾಡಿದೆ.

ತ್ರಿಚಕ್ರ ವಾಹನ ಚಾಲಕನಿಗೆ ಯಾವುದೇ ಗಂಭೀರ ಗಾಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಕರುಣರತ್ನೆಗೆ ಜಾಮೀನು ದೊರಕಿದ್ದು, ಈ ವಾರದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವ ನಿರೀಕ್ಷೆಯಿದೆ.

2012ರಲ್ಲಿ ಮಹೇಲಾ ಜಯವರ್ಧನೆ ನಾಯಕತ್ವದಲ್ಲಿ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಕರುಣರತ್ನೆ, ಇಲ್ಲಿಯವರೆಗೆ 60 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 36.05 ಸರಾಸರಿಯಲ್ಲಿ 8 ಶತಕ ಹಾಗೂ 22 ಅರ್ಧಶತಕಗಳೊಂದಿಗೆ 4,074 ರನ್ ಕಲೆ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News