ರೋಹಿತ್‌ಗೆ 12 ಲಕ್ಷ ರೂ. ದಂಡ
Update: 2019-03-31 23:51 IST
ಮೊಹಾಲಿ, ಮಾ.31: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ರೇಟ್ ತಪ್ಪಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
‘‘ಈ ಋತುವಿನಲ್ಲಿ ಇದು ಮುಂಬೈ ತಂಡದಿಂದ ಮೊದಲ ನಿಯಮ ಉಲ್ಲಂಘನೆ ಪ್ರಕರಣವಾಗಿದ್ದು ಶರ್ಮಾಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ’’ ಎಂದು ಮಾಧ್ಯಮಕ್ಕೆ ಐಪಿಎಲ್ ಸಂಘಟನಾ ಸಮಿತಿ ಹೇಳಿದೆ. ಈ ಪಂದ್ಯವನ್ನು ಪಂಜಾಬ್ ತಂಡ 8 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.