ಒಪ್ಪಂದವಿಲ್ಲದ ಬ್ರೆಕ್ಸಿಟ್ ಸಾಧ್ಯತೆ: ಐರೋಪ್ಯ ಒಕ್ಕೂಟ ಸಂಧಾನಕಾರ
Update: 2019-04-03 22:37 IST
ಲಂಡನ್, ಎ. 3: ಬ್ರೆಕ್ಸಿಟ್ ಕುರಿತ ಬಿಕ್ಕಟ್ಟು ಬ್ರಿಟಿಶ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಮುಂದುವರಿಯುತ್ತಿರುವುದನ್ನು ನೋಡಿದರೆ, ಎಪ್ರಿಲ್ 12ರಂದು ಬ್ರಿಟನ್ ಯಾವುದೇ ಒಪ್ಪಂದವಿಲ್ಲದೆ ಐರೋಪ್ಯ ಒಕ್ಕೂಟದಿಂದ ಹೊರಬರುವುದು ಖಚಿತ ಎನಿಸುತ್ತದೆ ಎಂದು ಐರೋಪ್ಯ ಒಕ್ಕೂಟದ ಮುಖ್ಯ ಸಂಧಾನಕಾರ ಮೈಕಲ್ ಬಾರ್ನಿಯರ್ ಹೇಳಿದ್ದಾರೆ.
ಬ್ರೆಕ್ಸಿಟ್ ಒಪ್ಪಂದಕ್ಕೆ ಪರ್ಯಾಯವಾಗಿ ಬ್ರಿಟನ್ ಸರಕಾರ ಮತ್ತು ಐರೋಪ್ಯ ಒಕ್ಕೂಟ ರೂಪಿಸಿರುವ ಹಲವು ಪ್ರಸ್ತಾವಗಳನ್ನು ಹೌಸ್ ಆಫ್ ಕಾಮನ್ಸ್ ಸೋಮವಾರ ರಾತ್ರಿ ತಿರಸ್ಕರಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಬ್ರಿಟನ್‌ನ ಬ್ರೆಕ್ಸಿಟ್ ಪರಿಸ್ಥಿತಿ ‘ಗಂಭೀರ ಬಿಕ್ಕಟ್ಟಾಗಿದೆ’ ಎಂದು ಅವರು ಹೇಳಿದ್ದಾರೆ.