ಅಮೆರಿಕದ ನಿಲುವಿನಿಂದ ಗೋಜಲು: ಚೀನಾ

Update: 2019-04-03 17:20 GMT

ಬೀಜಿಂಗ್, ಎ. 3: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಪ್ರಸ್ತಾಪವನ್ನು ಇತ್ಯರ್ಥಪಡಿಸಲು ತಾನು ಕಠಿಣ ಪ್ರಯತ್ನ ಮಾಡುತ್ತಿರುವುದಾಗಿ ಚೀನಾ ಬುಧವಾರ ಹೇಳಿದೆ.

ಅದೇ ವೇಳೆ, ಮಸೂದ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲು ‘ಲಭ್ಯವಿರುವ ಎಲ್ಲ ಸಂಪನ್ಮೂಲ’ಗಳನ್ನು ಬಳಸುವುದಾಗಿ ಅಮೆರಿಕ ನೀಡಿರುವ ಹೇಳಿಕೆಯನ್ನು ಅದು ಟೀಕಿಸಿದೆ.

ಚೀನಾದ ಈ ನಿಲುವು ಪರಿಸ್ಥಿತಿಯನ್ನು ಮತ್ತಷ್ಟು ‘ಗೋಜಲು’ಗೊಳಿಸುತ್ತದೆ ಎಂದು ಅದು ಹೇಳಿದೆ.

 ಅಮೆರಿಕದ ಟೆಕ್ಸಾಸ್ ರಾಜ್ಯದ ಕ್ರಾಸ್‌ಬಿಯಲ್ಲಿರುವ ರಾಸಾಯನಿಕ ಸ್ಥಾವರವೊಂದರಲ್ಲಿ ಮಂಗಳವಾರ ಬೆಂಕಿ ಅಪಘಾತ ಸಂಭವಿಸಿತು. ದುರಂತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News