‘ವಿಂಡ್‌ರಶ್’ ವಲಸಿಗರಿಗೆ ಬ್ರಿಟನ್ ಪರಿಹಾರ
Update: 2019-04-03 22:52 IST
ಲಂಡನ್, ಎ. 3: 1948 ಮತ್ತು 1988ರ ನಡುವಿನ ಅವಧಿಯಲ್ಲಿ ಬ್ರಿಟನ್‌ಗೆ ಆಗಮಿಸಿರುವ ಭಾರತೀಯರು ಮತ್ತು ಇತರರಿಗೆ ಬ್ರಿಟನ್ ಸರಕಾರ ಬುಧವಾರ 200 ಮಿಲಿಯ ಪೌಂಡ್ (ಸುಮಾರು 1,800 ಕೋಟಿ ರೂ.) ಪರಿಹಾರ ಘೋಷಿಸಿದೆ.
ಈ ವಲಸಿಗರ ವಾಸ್ತವ್ಯ ಸ್ಥಾನಮಾನದ ಅನಿಶ್ಚಿತತೆಗೆ ಸಂಬಂಧಿಸಿ ಗೊಂದಲ ಉಂಟಾಗಿತ್ತು. ‘ವಿಂಡ್‌ರಶ್’ ವಿವಾದ ಎಂಬುದಾಗಿ ಕರೆಯಲ್ಪಡುತ್ತಿರುವ ಈ ವಿವಾದವು 2018ರ ಕಾಮನ್‌ವೆಲ್ತ್ ಶೃಂಗ ಸಮ್ಮೇಳನದಲ್ಲಿ ಬ್ರಿಟನ್ ಸರಕಾರಕ್ಕೆ ಮುಜುಗರ ತಂದಿತ್ತು.
‘ವಿಂಡ್‌ರಶ್’ ಎಂಬ ಹಡಗಿನಲ್ಲಿ ಈ ವಲಸಿಗರು ಮೊದಲಿಗೆ ಬ್ರಿಟನ್‌ಗೆ ಬಂದಿದ್ದರು.