ರೆವೆಲ್ಯೂಶನರಿ ಗಾರ್ಡ್ಸ್‌ಗಳನ್ನು ಉಗ್ರರೆಂದು ಘೋಷಿಸಿದಲ್ಲಿ ಅಮೆರಿಕ ಸೇನೆ ಕಪ್ಪುಪಟ್ಟಿಗೆ: ಇರಾನ್ ಎಚ್ಚರಿಕೆ

Update: 2019-04-07 17:18 GMT

 ಟೆಹರಾನ್,ಎ.7: ಒಂದು ವೇಳೆ ಅಮೆರಿಕವು, ಇರಾನ್‌ನ ಉತ್ಕೃಷ್ಟ ಸೇನಾಪಡೆಯಾದ ರೆವೆಲ್ಯೂಶನರಿ ಗಾರ್ಡ್ಸ್‌ಗೆ ಭಯೋತ್ಪಾದಕರೆಂದು ಹಣೆಪಟ್ಟಿ ಕಟ್ಟಿದಲ್ಲಿ, ಇರಾನ್ ಕೂಡಾ ಅಮೆರಿಕ ಸೇನೆಯನ್ನ್ನು ಭಯೋತ್ಪಾದಕರ ಸಂಘಟನೆಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಿದೆಯೆಂದು ಇರಾನಿನ ಸಂಸದರೊಬ್ಬರು ಶನಿವಾರ ತಿಳಿಸಿದ್ದಾರೆ.

 ‘‘ ಒಂದು ವೇಳೆ ಅಮೆರಿಕವು ರೆವೆಲ್ಯೂಶನರಿ ಗಾರ್ಡ್ಸ್‌ಗಳನ್ನು ಭಯೋತ್ಪಾದಕ ಗುಂಪುಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದಲ್ಲಿ, ನಾವು ಕೂಡಾ ಅಮೆರಿಕ ಸೇನೆಯನ್ನು ಐಸಿಸ್ ನಂತರದ ಉಗ್ರರ ಗುಂಪೆಂದು ಪರಿಗಣಿಸಿ, ಕಪ್ಪುಪಟ್ಟಿಗೆ ಸೇರಿಸಲಿದ್ದೇವೆ’’ ಎಂದು ಇರಾನ್ ಸಂಸತ್‌ನ ರಾಷ್ಟ್ರೀಯ ಭದ್ರತಾ ಸಮಿತಿಯ ವರಿಷ್ಠ ಹೆಶ್ಮತುಲ್ಲಾಹ್   ಟ್ವೀಟಿಸಿದ್ದಾರೆ.

ಅಮೆರಿಕವು, ಇರಾನ್‌ನ ರೆವೆಲ್ಯೂಶನರಿ ಗಾರ್ಡ್ಸ್‌ನ್ನು ವಿದೇಶಿ ಭಯೋತ್ಪಾದಕ ಸಂಘಟನೆಯೆಂದು ಘೋಷಿಸುವ ಸಾಧ್ಯತೆಯಿರುವುದಾಗಿ ಅಮೆರಿಕದ ಅಧಿಕಾರಿಗಳು ತಿಳಿಸಿರುವುದಾಗಿ ರಾಯ್ಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿತ್ತು. ಒಂದು ವೇಳೆ ಅಮೆರಿಕವು ಇಂತಹ ಕ್ರಮಕ್ಕೆ ಮುಂದಾದಲ್ಲಿ ಇನ್ನೊಂದು ದೇಶದ ಸೇನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಅದು ಘೋಷಿಸಿರುವುದು ಇದು ಮೊದಲ ಸಲವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News