'ಯುರೋಪ್ ಒಕ್ಕೂಟ' ಇಲ್ಲದ ಪಾಸ್‌ಪೋರ್ಟ್‌ಗಳ ವಿತರಣೆ ಆರಂಭಿಸಿದ ಬ್ರಿಟನ್

Update: 2019-04-07 17:48 GMT

 ಲಂಡನ್,ಎ.6:ಯುರೋಪ್ ಒಕ್ಕೂಟದಿಂದ ನಿರ್ಗಮಿಸುವ ತನ್ನ 'ಬ್ರೆಕ್ಸಿಟ್'ಯೋಜನೆಯ ಕುರಿತಾದ ಅನಿಶ್ಚಿತತೆ ಮುಂದುವರಿದಿರುವಂತೆಯೇ ಬ್ರಿಟನ್, 'ಯುರೋಪ್ ಒಕ್ಕೂಟ' ಎಂಬ ಪದಗಳನ್ನು ಹೊಂದಿರದ ಪಾಸ್‌ಪೋರ್ಟ್‌ಗಳನ್ನು ನೀಡಲು ಆರಂಭಿಸಿದೆ.

ಮಾರ್ಚ್ 30ರಿಂದ ವಿತರಿಸಲಾಗುತ್ತಿರುವ ಕೆಲವು ಪಾಸ್‌ಪೋರ್ಟ್‌ಗಳಲ್ಲಿ ಯುರೋಪ್ ಒಕ್ಕೂಟ ಎಂಬ ಪದವನ್ನು ಕೈಬಿಟ್ಟಿರುವುದನ್ನು ಬ್ರಿಟನ್ ಗೃಹ ಸಚಿವಾಲಯ ದೃಢಪಡಿಸಿದೆ. ಬ್ರೆಕ್ಸಿಟ್ ನಿರ್ಣಯದ ಪ್ರಕಾರ ಬ್ರಿಟನ್ ಈ ವರ್ಷದ ಮಾರ್ಚ್ 29ರಂದು ಯುರೋಪ್ ಒಕ್ಕೂಟದಿಂದ ನಿರ್ಗಮಿಸಬೇಕಾಗಿತ್ತು.

 ಆದಾಗ್ಯೂ ಕೆಲವು ಹೊಸದಾಗಿ ವಿತರಿಸಲಾಗಿರುವ ಪಾಸ್‌ಪೋರ್ಟ್‌ಗಳಲ್ಲಿ ಇನ್ನೂ ಯುರೋಪ್ ಒಕ್ಕೂಟದ ಹೆಸರು ಇರುವುದಾಗಿ ಬ್ರಿಟನ್ ಗೃಹ ಸಚಿವಾಲಯ ತಿಳಿಸಿದೆ.' ಉಳಿದಿರುವ ದಾಸ್ತಾನನ್ನು ಬಳಸಿಕೊಳ್ಳುವ ಹಾಗೂ ತೆರಿಗೆದಾರನ ಹಣಕ್ಕೆ ವೌಲ್ಯವನ್ನು ನೀಡುವ ಉದ್ದೇಶದಿಂದ ಅಲ್ಪಸಮಯದ ಅವಧಿಗೆ ಯುರೋಪ್ ಯೂನಿಯನ್ ಎಂಬ ಹೆಸರನ್ನು ಹೊಂದಿರುವ ಪಾಸ್‌ಪೋರ್ಟ್‌ಗಳನ್ನು ವಿತರಿಸುವುದನ್ನು ಮುಂದುವರಿಸಲಾಗುವುದ ಎಂದು ಸಚಿವಾಲ.ದ ವಕ್ತಾರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News