×
Ad

ಟ್ರಿಪೋಲಿ ಸಂಘರ್ಷ: 2,200 ಮಂದಿ ನಿರ್ವಸಿತ: ವಿಶ್ವಸಂಸ್ಥೆ

Update: 2019-04-08 23:40 IST

ಲಿಬಿಯ, ಎ. 8: ಲಿಬಿಯ ರಾಜಧಾನಿ ಟ್ರಿಪೋಲಿಯಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಸುಮಾರು 2,200 ಮಂದಿ ನಿರ್ವಸಿತರಾಗಿದ್ದಾರೆ ಹಾಗೂ ಇನ್ನೂ ಹೆಚ್ಚು ಮಂದಿ ಪಲಾಯನಗೈಯಬಹುದು ಎಂದು ವಿಶ್ವಸಂಸ್ಥೆ ಸೋಮವಾರ ಹೇಳಿದೆ. ಕೆಲವು ಸ್ಥಳಗಳಲ್ಲಿ ನಾಗರಿಕರು ಸಿಕ್ಕಿಹಾಕಿಕೊಂಡಿದ್ದಾರೆ.

ಸರಕಾರಿ ಪಡೆಗಳು ಮತ್ತು ಬಂಡುಕೋರ ಖಲೀಫ ಹಫ್ತಾರ್‌ನ ಸೈನಿಕರ ನಡುವೆ ಟ್ರಿಪೋಲಿ ಸಮೀಪ ಸಂಭವಿಸಿದ ಸಂಘರ್ಷದಲ್ಲಿ ಕನಿಷ್ಠ 32 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.ಹಫ್ತಾರ್‌ನ ಸೈನಿಕರು ಮತ್ತು ಅಂತರ್‌ರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರದ ಸೈನಿಕರ ನಡುವೆ ರವಿವಾರ ಭೀಕರ ಸಂಘರ್ಷ ಆರಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News